ಕರ್ನಾಟಕ

karnataka

ETV Bharat / state

ಜಾನುವಾರುಗಳಿಗೆ ಲಂಪಿ ಕಾಯಿಲೆ; ಪಶು ಮಂತ್ರಿಗಳ ತವರಲ್ಲಿ ಪಶುಗಳಿಗಿಲ್ಲ ರಕ್ಷಣೆ - Lumpy sickness for cattle

ಪಶು ಸಂಗೋಪನಾ ಸಚಿವರ ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಲಂಪಿ ಕಾಯಿಲೆ ಹೆಚ್ಚಾಗಿದ್ದು, ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ದೊರಕುವಂತೆ ಮಾಡಿಕೊಡಬೇಕೆಂದು ರೈತರು ಮನವಿ ಮಾಡಿದ್ದಾರೆ.

Lumpy sickness
ಲಂಪಿ ಕಾಯಿಲೆ

By

Published : Sep 18, 2020, 10:48 PM IST

ಸುರಪುರ:ಸುರಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ ಸುಮಾರು 3 ರಿಂದ 4 ಸಾವಿರ ಜಾನುವಾರುಗಳಿದ್ದು, ಒಂದರಿಂದ ಒಂದರಂತೆ ಎಲ್ಲ ಪಶುಗಳಿಗೂ ಲಿಂಪಿ ವೈರಸ್ ಹಾಗೂ ಹಲವು ವಿವಿಧ ವೈರಸ್ ಅಂಟಿಕೊಂಡಿದ್ದು, ಜಾನುವಾರುಗಳ ಗೋಳು ಕೇಳುವರಿಲ್ಲದಂತಾಗಿದೆ.

ಪಶುಗಳಿಗೆ ಸೂಕ್ತ ತಜ್ಞ ವೈದ್ಯರಿಲ್ಲದ ಕಾರಣ ಹಲವು ವೈರಸ್​ಗಳಿಗೆ ಜಾನುವಾರುಗಳು ಬಲಿಯಾಗುತ್ತಿವೆ. ಇದರಿಂದ ಕೃಷಿ ಚಟುವಟಿಕೆ ಮಾಡಲಾಗದೇ ಮತ್ತು ಲಕ್ಷಾಂತರ ಹಣ ನೀಡಿ ಖರೀದಿಸಿದ ಪಶುಗಳ ಸ್ಥಿತಿ ನೋಡಿ ರೈತರು ಕಣ್ಣಿರು ಸುರಿಸುವಂತಾಗಿದೆ.

ಜಾನುವಾರುಗಳಿಗೆ ಲಂಪಿ ಕಾಯಿಲೆ

ಪಶುಮಂತ್ರಿ ಪ್ರಭು ಚೌಹಾಣ್​​ ಉಸ್ತುವಾರಿಯ ಜಿಲ್ಲೆಯ ಕಡೆ ಗಮನವಹಿಸಿ ಮೂಕ ವೇದನೆ ಅನುಭವಿಸುತ್ತಿರುವ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ದೊರಕುವಂತೆ ಮಾಡಿಕೊಡಬೇಕೆಂದು ರೈತರು ಮನವಿ ಮಾಡುತ್ತಿದ್ದಾರೆ. ರೈತರ ಮನವಿಗೆ ಜಿಲ್ಲಾಡಳಿತ ಹಾಗೂ ಪಶು ಇಲಾಖೆ ಗಮನವಹಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಅಲ್ಲದೇ ಜಿಲ್ಲೆಯ ಜಾನುವಾರುಗಳಲ್ಲಿ ಹೆಚ್ಚುತ್ತಿರುವ ಲಂಪಿ ಕಾಯಿಲೆ ಕುರಿತು ಶಾಸಕ ರಾಜುಗೌಡ ಮಾತನಾಡಿ, ಲಂಪಿ ಕಾಯಿಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details