ಯಾದಗಿರಿ:ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಕ್ರಾಸ್ ಬಳಿ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದೇವಾಪುರದ ನಿವಾಸಿ ಅಮರೇಶ ಪೈದೊಡ್ಡಿ (38) ಮೃತ ದುರ್ದೈವಿ.
ಜಮೀನಿಗೆ ಕೆಲಸದ ನಿಮಿತ್ತ ಹೋಗುವಾಗ ಸಿಂಧನೂರಿನಿಂದ ಮಹಾರಾಷ್ಟ್ರಕ್ಕೆ ಹೊರಟ್ಟಿದ್ದ ಲಾರಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ದಾರಿಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಶಾಸಕ ರಾಜೂಗೌಡ ಅವರು ಹೋಗುವಾಗ ಅಪಘಾತವಾಗಿರುವುದನ್ನು ಕಾಣುತ್ತಿದ್ದಂತೆ ವಾಹನ ನಿಲ್ಲಿಸಿ ವಿಚಾರಿಸಿದ್ದಾರೆ. ಸ್ಥಳೀಯರು ಲಾರಿಯನ್ನು ಬೆಂಬತ್ತಿ ಚಾಲಕನ್ನು ಹಿಡಿದಿದ್ದಾರೆ. ಬಳಿಕ ಆ್ಯಂಬುಲೆನ್ಸ್ಗೆ ಕರೆ ಮಾಡಿ ಶಾಸಕರು, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.