ಕರ್ನಾಟಕ

karnataka

ETV Bharat / state

ಲಾರಿ-ಬಸ್​​ ಡಿಕ್ಕಿ: ಮಹಿಳೆ ಸ್ಥಳದಲ್ಲೇ ಸಾವು, ಚಾಲಕನ ಹೊಟ್ಟೆಯಲ್ಲಿ ಸಿಲುಕಿದ ರಾಡ್​ - ಲಾರಿ ಮತ್ತು ಬಸ್ ಮುಖಾಮುಖಿ ಡಿಕ್ಕಿ

ಯಾದಗಿರಿಯಲ್ಲಿ ಲಾರಿ ಮತ್ತು ಬಸ್ ಮುಖಾಮುಖಿ ಡಿಕ್ಕಿಯಾಗಿ ಮಹಿಳೆವೋರ್ವಳು ಮೃತಪಟ್ಟಿದ್ದಾಳೆ. ಇನ್ನು ಲಾರಿ ಚಾಲಕನ ಹೊಟ್ಟೆಯಲ್ಲಿ ಕಿಟಕಿಯ ಸರಳೊಂದು ಸಿಲುಕಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮಹಿಳೆ ಸ್ಥಳದಲ್ಲೇ ಸಾವು
ಮಹಿಳೆ ಸ್ಥಳದಲ್ಲೇ ಸಾವು

By

Published : Dec 15, 2019, 8:38 PM IST

ಯಾದಗಿರಿ: ಲಾರಿ ಮತ್ತು ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ, ಜಿಲ್ಲೆಯ ಗುರಮಿಠಕಲ್ ಪಟ್ಟಣದ ಯಶೋಧಾ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

ತೆಲಂಗಾಣ ಮೂಲದ ಮಲ್ಲರೆಡ್ಡಿಪಲ್ಲಿ ಗ್ರಾಮದ ಚಂದ್ರಮ್ಮ 48 ಮೃತರು.ತೆಲಂಗಾಣ ರಾಜ್ಯದ ಸಾರಿಗೆ ಬಸ್, ಪರಗಿ ಕಡೆಗೆ ತೆರಳುತ್ತಿದ್ದ ವೇಳೆ ಅದೇ ರಸ್ತೆಯಲ್ಲಿ ಹೈದ್ರಾಬಾದ್ ನಿಂದ ಗುರಮಿಠಕಲ್ ಕಡೆ ವೇಗವಾಗಿ ಬರುತ್ತಿದ್ದ ಲಾರಿಯು ಬಸ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಲಾರಿ ಚಾಲಕನ ಹೊಟ್ಟೆಯಲ್ಲಿ ಕಬ್ಬಿಣದ ರಾಡ್ ಹೊಕ್ಕಿದ್ದರು ಕೂಡ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಚಾಲಕನ ಹೊಟ್ಟೆಯಲ್ಲಿ ಕಬ್ಬಿಣದ ರಾಡ್ ಹೊಕ್ಕಿದ್ದರೂ ಕೂಡ ಪ್ರಾಣಾಪಾಯದಿಂದ ಪಾರು

ಈ ದುರ್ಘಟನೆಯಲ್ಲಿ ಲಾರಿ ಚಾಲಕ ಸೇರಿದಂತೆ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಗುರಮಿಠಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುರಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details