ಸುರಪುರ:ಕೊರೊನಾ ವೈರಸ್ ಹರಡದಂತೆ ತಡೆಯಲು ಸಾಮಾಜಿಕ ಅಂತರ ಪಾಲನೆ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸರ್ಕಾರ ನಿಯಮ ರೂಪಿಸಿದೆ. ಆದ್ರೆ ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ರಸ್ತೆಗೆ ಬರುತ್ತಿರುವ ಸವಾರರಿಗೆ ನಗರಸಭೆ ದಂಡ ವಿಧಿಸುತ್ತಿದೆ.
ಲಾಕ್ಡೌನ್ 'ರೂಲ್ಸ್' ಉಲ್ಲಂಘನೆ...100 ರೂ, ದಂಡದೊಂದಿಗೆ 'ಮಾಸ್ಕ್' ವಿತರಣೆ - ನಗರಸಭೆ ಸಿಬ್ಬಂದಿಗಳಿಂದ ದಂಡ
ಇಂದು ಬೆಳಗ್ಗೆಯಿಂದಲೇ ರಸ್ತೆಗಿಳಿದ ನಗರಸಭೆಯ ಸಿಬ್ಬಂದಿ ಮಾಸ್ಕ್ ಇಲ್ಲದೆ ಹೊರಗೆ ಬರುವ ಬೈಕ್ ಸವಾರರನ್ನು ತಡೆದು ನಿಲ್ಲಿಸಿ, 100 ರೂಪಾಯಿ ದಂಡ ವಿಧಿಸುವ ಜೊತೆಗೆ ಒಂದು ಮಾಸ್ಕ್ ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
![ಲಾಕ್ಡೌನ್ 'ರೂಲ್ಸ್' ಉಲ್ಲಂಘನೆ...100 ರೂ, ದಂಡದೊಂದಿಗೆ 'ಮಾಸ್ಕ್' ವಿತರಣೆ Lockdown 'Rules' violation](https://etvbharatimages.akamaized.net/etvbharat/prod-images/768-512-7095808-222-7095808-1588837353070.jpg)
ಲಾಕ್ಡೌನ್ 'ರೂಲ್ಸ್' ಉಲ್ಲಂಘನೆ.
ಇಂದು ಬೆಳಗ್ಗೆಯಿಂದಲೇ ರಸ್ತೆಗಿಳಿದ ನಗರಸಭೆಯ ಸಿಬ್ಬಂದಿ ಮಾಸ್ಕ್ ಇಲ್ಲದೆ ಹೊರಗೆ ಬರುವ ಬೈಕ್ ಸವಾರರನ್ನು ತಡೆದು ನಿಲ್ಲಿಸಿ, 100 ರೂಪಾಯಿಗಳ ದಂಡ ವಿಧಿಸುವ ಜೊತೆಗೆ ಒಂದು ಮಾಸ್ಕ್ ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
100 ರೂ,ದಂಡದೊಂದಿಗೆ 'ಮಾಸ್ಕ್' ವಿತರಣೆ
ಜನರಿಗೆ ನಗರಸಭೆಯಿಂದ ಎಷ್ಟು ಜಾಗೃತಿ ಮೂಡಿಸಿದರೂ ಮಾಸ್ಕ್ ಇಲ್ಲದೆ ಹೊರಗೆ ಬರುತ್ತಾರೆ, ಇದರಿಂದ ಸೋಂಕು ತಗುಲುವ ಸಾಧ್ಯತೆ ಇರುವುದರಿಂದ 100 ರೂಪಾಯಿ ದಂಡ ವಿಧಿಸಿದ್ದು, ಜೊತೆಗೆ ಮಾಸ್ಕ್ ನೀಡಿದ್ದಲ್ಲಿ ಜಾಗೃತರಾಗುತ್ತಾರೆ ಎಂದು ನಗರಸಭೆ ಸಿಬ್ಬಂದಿ ತಿಳಿಸಿದ್ದಾರೆ.