ಕರ್ನಾಟಕ

karnataka

ಕೊಂಡುಕೊಳ್ಳುವವರಿಲ್ಲದೆ ಕೊಳೆಯುತ್ತಿವೆ ಕಲ್ಲಂಗಡಿ: ಸಂಕಷ್ಟದಲ್ಲಿ 'ಲಾಕ್​ಡೌನ್'​ ಆದ ರೈತ

ಯಾದಗಿರಿಯ ಗುರುಮಠಕಲ್​ನಲ್ಲಿ ರೈತನೊಬ್ಬ ಕಲ್ಲಂಗಡಿ ಬೆಳೆ ಬೆಳೆದಿದ್ದು, ಲಾಕ್​ಡೌನ್​ ನಿಂದಾಗಿ ಕೊಂಡುಕೊಳ್ಳುವವರಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ.

By

Published : Apr 21, 2020, 9:59 AM IST

Published : Apr 21, 2020, 9:59 AM IST

yadgiri farmers facing problems
ಕೊಂಡುಕೊಳ್ಳುವವರಿಲ್ಲದೆ ಹಾಳಾಗುತ್ತಿವೆ ರೈತ ಬೆಳೆದ ಕಲ್ಲಂಗಡಿ

ಯಾದಗಿರಿ(ಗುರುಮಠಕಲ್):ಕೊರೊನಾ ದೇಶದ ಆರ್ಥಿಕತೆ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ರೈತರು, ಬೆಳೆಗಾರರು ತಾವು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ , ಬೆಲೆ ಸಿಗದೆ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆದಿರುವ ರೈತ ಮಾರುಕಟ್ಟೆಯಿಲ್ಲದೆ ಪರದಾಡುತ್ತಿದ್ದಾನೆ.

ಕೊಂಡುಕೊಳ್ಳುವವರಿಲ್ಲದೆ ಹಾಳಾಗುತ್ತಿವೆ ರೈತ ಬೆಳೆದ ಕಲ್ಲಂಗಡಿ

ಮೂಲತಃ ಯಾದಗಿರಿ ಜಿಲ್ಲೆ ಗುರುಮಠಕಲ್​​ ತಾಲೂಕಿನ ಬಿಳಿಚಕ್ರ ಗ್ರಾಮದ ಮಹೇಂದ್ರ ಪೂಜಾರಿ ಎಂಬ ರೈತ, ಮಹಾರಾಷ್ಟ್ರದ ಪುಣೆಯ ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕೃಷಿ ಮೇಲಿನ ಒಲವಿನಿಂದ ಕೆಲಸಕ್ಕೆ ರಾಜೀನಾಮೆ ಕೊಟ್ಟು ತನ್ನ ಜಾಮೀನಿಲ್ಲಿ ಬೀಟ್​ರೋಟ್​ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ.

ಅಷ್ಟೇ ಅಲ್ಲದೇ ತಮ್ಮ 2 ಎಕರೆ ಜಾಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದು, ಉತ್ತಮ ಬೆಳೆ ಬಂದಿದೆ. ಆದರೆ ಲಾಕ್​ಡೌನ್​ ಸಂಬಂಧ ಕಲ್ಲಂಗಡಿ ಕೊಂಡುಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ಇತ್ತೀಚಿಗಷ್ಟೆ ಯಾದರಿಗಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅವರು ರೈತರೊಬ್ಬರ 300 ಕ್ವಿಂಟಲ್ ಕಲ್ಲಂಗಡಿ ಖರೀದಿಸಿ, ಹಂಚಿಕೆ ಮಾಡಿದ್ದರು.

ಅದೇ ರೀತಿ ತಾನು ಬೆಳೆದ ಕಲ್ಲಂಗಡಿಯನ್ನು ಖರೀದಿ ಮಾಡಲು ಯಾರಾದರೂ ಮುಂದೆ ಬರುತ್ತಾರೋ ಎಂಬ ನಿರೀಕ್ಷೆಯಲ್ಲಿ ರೈತ ಮಹೇಂದ್ರ ಕಾಯುತ್ತಿದ್ದು, ಇವರ ಬಳಿ ಬೆಳೆ ಖರೀದಿಸುವವರು ಇಚ್ಚಿಸುವವರು ಸಂಪರ್ಕಿಸಲು ದೂರವಾಣಿ ಸಂಖ್ಯೆ: 7350196302 ಕರೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details