ಸುರಪುರ:ನಗರದಲ್ಲಿ ವಾಸವಾಗಿರುವ ಚಮ್ಮಾರಿಕೆ ಕಾಯಕದ ಕುಟುಂಬಗಳಿಗೆ ಲಾಕ್‌ಡೌನ್‌ನಿಂದ ತೀವ್ರ ಸ್ವರೂಪದ ತೊಂದರೆಗೆ ಸಿಲುಕಿವೆ.
ದಿನಕ್ಕೆ 50 ರೂಪಾಯಿ ದುಡಿಮೆಯೂ ಕಷ್ಟವಾಗಿದೆ: ಇದು ಚಮ್ಮಾರರ ಬದುಕಿನ ವೇದನೆ - ಹೊತ್ತಿನ ಊಟಕ್ಕೂ ಪರದಾಡುತ್ತಿವೆ ಚಮ್ಮಾರ ಕುಟುಂಬಗಳು
ನಗರದಲ್ಲಿ ವಾಸವಾಗಿರುವ ಚಮ್ಮಾರಿಕೆ ಕಾಯಕದ ಕುಟುಂಬಗಳಿಗೆ ಲಾಕ್‌ಡೌನ್‌ನಿಂದ ದೈನಂದಿನ ಬದುಕಿಗೆ ತೊಂದರೆಯಾಗಿದೆ.
ಪಾದರಕ್ಷೆಗಳನ್ನು ಸರಿಪಡಿಸಿ ಕೈಗೆ ಬಂದ ಆದಾಯದಲ್ಲಿ ಜೀವನ ನಡೆಸುವ ಈ ಕುಟುಂಬಗಳಿಗೆ ಈಗ ಕೆಲಸವಿಲ್ಲದಂತಾಗಿದೆ. ಸಂಘ ಸಂಸ್ಥೆಗಳು ಕೊಡುವ ಆಹಾರ ದಿನಸಿ ಮೇಲೆ ಜೀವನ ಸಾಗಿಸುತ್ತಿದ್ದಾರೆ. ಕೊರೊನಾದಿಂದಾಗಿ ಜನರು ಹೊರಗೆ ಬರದಿರುವುದರಿಂದ ಪಾದರಕ್ಷೆ ದುರಸ್ತಿ ಕೆಲಸ ನಿಂತುಹೋಗಿದೆ. ಇದರಿಂದ ಚಮ್ಮಾರರ ಬದುಕೂ ನಿಂತು ಹೋಗಿದೆ. ದಿನಕ್ಕೆ 50 ರೂಪಾಯಿ ದುಡಿಯಲಾಗದೆ ಕಷ್ಟಪಡುವಂತಾಗಿದೆ ಎಂದು ಚಮ್ಮಾರಿಕೆ ಮಾಡುವ ಅಂಬ್ಲಯ್ಯ ಗೋಳು ತೋಡಿಕೊಂಡರು.
ಹೀಗಾಗಿ ಕುಟುಂಬಗಳಿಗೆ ತಿಂಗಳಿಗೆ ಕನಿಷ್ಠ 10 ಸಾವಿರ ರೂ ಪಿಂಚಣಿ ಹಾಗೂ ಚಮ್ಮಾರಿಕೆ ಕಿಟ್‌ಗಳನ್ನು ಸರ್ಕಾರ ನೀಡಬೇಕೆಂದು ಅನೇಕರು ಆಗ್ರಹಿಸುತ್ತಿದ್ದಾರೆ.