ಯಾದಗಿರಿ: ಲಾಕ್ಡೌನ್ ಹಿನ್ನೆಲೆ ರೈತನೊಬ್ಬ ಬೆಳೆದ ನುಗ್ಗೇಕಾಯಿ ಮಾರುಕಟ್ಟೆಯಲ್ಲಿ ಕೇಳದಂತಾಗಿದೆ. ಹಾಗಾಗಿ ಬೆಳೆ ಜಮೀನಿನಲ್ಲೇ ಹಾಳಾಗಿದೆ.
ಲಾಕ್ಡೌನ್ ಎಫೆಕ್ಟ್: 2 ಎಕರೆಯಲ್ಲಿ ಬೆಳೆದಿದ್ದ ನುಗ್ಗೇಕಾಯಿ ಹಾಳು
ಬೆಳೆದ ಬೆಳೆಗೆ ಸೂಕ್ತ ದರದಲ್ಲಿ ಖರೀದಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಅಧಿಕಾರಿಗಳು ಮುಂದಾಬೇಕು ಎಂದು ರೈತ ರಾಘವೇಂದ್ರ ಆಗ್ರಹಿಸಿದ್ದಾರೆ.
ನುಗ್ಗೇಕಾಯಿ ಹಾಳು
ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡಬೆಂಬಳಿ ಗ್ರಾಮದ ಯುವ ರೈತ ರಾಘವೇಂದ್ರ ಐರೆಡ್ಡಿ ತಮ್ಮ 2 ಎಕರೆ ಜಮೀನಿನಲ್ಲಿ ನುಗ್ಗೇಕಾಯಿ ಬಂಪರ್ ಬೆಳೆ ಬೆಳೆದಿದ್ದರು.
ಅದಕ್ಕಾಗಿ ಸಾಲ ಮಾಡಿದ್ದರು. ಉತ್ತಮ ಫಸಲು ಕೈಗೆ ಬಂತು ಅನ್ನೋವಷ್ಟರಲ್ಲಿ ದೇಶದಲ್ಲಿ ಲಾಕ್ಡೌನ್ ಹೇರಲಾಯಿತು. ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಈ ಬೆಳೆಗಾಗಿ ಒಂದೂವರೆ ಲಕ್ಷ ರೂ. ವೆಚ್ಚ ಮಾಡಿದ್ದರಂತೆ.