ಯಾದಗಿರಿ:ಸತತವಾಗಿ ಸುರಿಯುತ್ತಿರುವ ಮಳೆಯಬ್ಬರ ಜಿಲ್ಲೆಯ ಜನಜೀವನವನ್ನು ನಲುಗಿಸಿದೆ. ಅತಿವೃಷ್ಟಿ ಹಾಗೂ ನೆರೆ ಭೀತಿ ಜನರನ್ನು ತಲ್ಲಣಗೊಳಿಸಿದೆ. ಶನಿವಾರ ಸಿಡಿಲು ಬಡಿದು ಓರ್ವ ಮಹಿಳೆ ಹಾಗೂ ವ್ಯಕ್ತಿಯೊಬ್ಬರು ದುರ್ಮರಣ ಹೊಂದಿದ್ದಾರೆ.
ಯಾದಗಿರಿಯಲ್ಲಿ ಸಿಡಿಲು ಬಡಿದು ಇಬ್ಬರು ಸಾವು - ಸತತ ಸುರಿಯುತ್ತಿರುವ ಮಳೆಯ ಅಬ್ಬರ
ಹೊಲದಲ್ಲಿ ಕೆಲಸ ಮುಗಿಸಿ ವಾಪಸ್ ಬರುತ್ತಿದ್ದ ಮಹಿಳೆ ಮತ್ತು ಮನೆಯ ಹೊರಗಡೆ ನಿಂತಿದ್ದ ವ್ಯಕ್ತಿಯೊಬ್ಬರು ಸಿಡಿಲು ಹೊಡೆದು ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಯಾದಗಿರಿಯಲ್ಲಿ ನಡೆದಿದೆ.
ಸಿಡಿಲು ಬಡಿದು ಇಬ್ಬರು ಸಾವು
ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿಯ ನಂದಮ್ಮ (35) ಹಾಗೂ ದೇವತ್ಕಲ್ ಗ್ರಾಮದ ರಾಜು ಸಿಂಗ್ (38) ಮೃತರು. ತಮ್ಮ ಭತ್ತದ ಜಮೀನಿನಲ್ಲಿನ ಕಳೆ ತೆಗೆದು ವಾಪಸ್ ಬರುವಾಗ ಸಿಡಿಲು ಬಡಿದು ನಂದಮ್ಮ ಮೃತಪಟ್ಟರೆ, ಮನೆ ಮುಂದೆ ನಿಂತಿದ್ದಾಗ ಸಿಡಿಲು ಬಡಿದು ರಾಜು ಸಿಂಗ್ ಕೊನೆಯುಸಿರೆಳೆದರು. ಜೊತೆಗೆ ಇವರ ಎರಡು ಮೇಕೆಗಳೂ ಕೂಡ ಸಾವನ್ನಪ್ಪಿದೆ.
ಇದನ್ನೂ ಓದಿ:ಹಾವೇರಿ: ಡ್ರ್ಯಾಗನ್ ಫ್ರೂಟ್ಗೂ ಬಂತು ಕೊಳೆ ರೋಗ, ರೈತನಿಗೆ ಚಿಂತೆ