ಯಾದಗಿರಿ: ವಚನಾನಂದ ಸ್ವಾಮೀಜಿ ಎರಡು ಮೂರು ತಿಂಗಳಲ್ಲಿ ತಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳಬೇಕು. ಇಲ್ಲವಾದಲ್ಲಿ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಗುಡುಗಿದ್ದಾರೆ.
'ವಚನಾನಂದ ಸ್ವಾಮೀಜಿ ರಾಜಕೀಯ ಹೇಳಿಕೆಗಳ ಬದಲು ಧರ್ಮದ ಕೆಲಸ ಮಾಡಲಿ' - ಶಾಸಕ ಬಸವನಗೌಡ ಪಾಟೀಲ ಯತ್ನಾಳ್
ವಚನಾನಂದ ಸ್ವಾಮೀಜಿ ಎರಡು ಮೂರು ತಿಂಗಳಲ್ಲಿ ತಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳಬೇಕು. ಇಲ್ಲವಾದಲ್ಲಿ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಗುಡುಗಿದ್ದಾರೆ.
ಜಿಲ್ಲೆಯ ಸುರಪುರದಲ್ಲಿ ಮಾತನಾಡಿದ ಶಾಸಕ ಪಾಟೀಲ ಯತ್ನಾಳ್, ಹರ ಜಾತ್ರೆಯಲ್ಲಿ ವಚನಾನಂದ ಸ್ವಾಮೀಜಿ ವೇದಿಕೆ ಮೇಲೆ ಶಾಸಕ ನಿರಾಣಿ ಪರವಾಗಿ ಮಾತನಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ರು. ಸಿಎಂ ಬಳಿ ನೀರಾಣಿ ಕ್ಷಮೆ ಕೇಳಿದ್ದನ್ನ ಸ್ವಾಗತಿಸಿದ ಯತ್ನಾಳ್, ತಪ್ಪು ಮಾಡಿದವರು ಕ್ಷಮೆ ಕೇಳಿದ್ದಾರೆ. ಹರ ಜಾತ್ರೆಯ ಘಟನೆ ಬಗ್ಗೆ ನಾಡಿನ ಜನ, ಮಠಾಧೀಶರು ವಿಷಾದ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿ ಧರ್ಮದ ಕೆಲಸ ಮಾಡ್ಬೇಕೆ ಹೊರತು ಇಂಥವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸ್ವಾಮಿಗಳು ಹೇಳುವುದು ತಪ್ಪು ಎಂದರು.
ಸ್ವಾಮೀಜಿ ಬಡವರ ಪರ ಮಾತಾಡಲಿ, ಧರ್ಮದ ಕೆಲಸ ಮಾಡಲಿ. ಕೊಟ್ಟಿರುವ ಹೇಳಿಕೆಗೆ ಸಂಬಂಧಿಸಿ ಸ್ವಾಮೀಜಿ ತಮ್ಮ ನಡೆಯನ್ನ ಸಮರ್ಥಿಸಿಕೊಂಡಿರಬಹುದು. ಆದರೆ, ಸಮಾಜ ಇದನ್ನು ಒಪ್ಪುವುದಿಲ್ಲ ಎಂದು ವಚನಾನಂದ ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.