ಗುರುಮಠಕಲ್ (ಯಾದಗಿರಿ):ತಾಲೂಕಿನ ಚಂಡರಕಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ. ಜಿಲ್ಲಾ ಅರಣ್ಯಾಧಿಕಾರಿಗಳು ಚಿರತೆಯ ಸಂಚಾರವನ್ನು ಖಚಿತಪಡಿಸಿದ್ದಾರೆ. ಗುರುಮಠಕಲ್ ಪಿಐ ದೌಲತ್ ಎನ್ ಕೆ ಅವರಿಗೆ ಶನಿವಾರದಂದು ಚಿರತೆ ಕಂಡಿದ್ದು, ಈ ಬಗ್ಗೆ ಅವರು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.
ಅರಣ್ಯಾಧಿಕಾರಿಗಳು ಚಿರತೆಯ ಹೆಜ್ಜೆಗಳ ಜಾಡನ್ನು ಆಧರಿಸಿ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಚಂಡರಕಿ, ಮಡೇಪಲ್ಲಿ, ಕೇಶ್ವರ ಗ್ರಾಮಗಳ ಜಮೀನಿನ ರೈತರು, ಸಾರ್ವಜನಿಕರು ಸೇರಿದಂತೆ ಸೇಡಂ ತಾಲೂಕಿನ ಗ್ರಾಮಸ್ಥರು, ಜಾನುವಾರುಗಳನ್ನು ಕಾಯುವವರು ಎಚ್ಚರಿಕೆಯಿಂದ ಇರುವಂತೆ ಡಂಗೂರ ಸಾರಲಾಗಿದೆ. ಮಿನಾಸಪೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಜರಾಪೂರ ಸೇರಿದಂತೆ ದಟ್ಟ ಅರಣ್ಯಕ್ಕೆ ಹೊಂದಿಕೊಂಡ ಗ್ರಾಮಗಳಲ್ಲಿ ಡಂಗುರ ಸಾರಿ ಜಾಗೃತಿ ಮೂಡಿಸಲಾಗಿದೆ.