ಕರ್ನಾಟಕ

karnataka

ETV Bharat / state

ಯಾದಗಿರಿಯ 'ಸಂತೃಪ್ತಿ' ಕ್ಯಾಂಟೀನ್​ನಲ್ಲಿ 10 ರೂ.ಗೆ ಹೊಟ್ಟೆ ತುಂಬಾ ಊಟ! - kannadanews

ಯಾದಗಿರಿಯಲ್ಲಿರುವ ಸಂತೃಪ್ತಿ ಕ್ಯಾಂಟೀನ್ ಕೇವಲ 10 ರೂಪಾಯಿಗೆ ಹಸಿದ ಜನರಿಗೆ ಅನ್ನ ನೀಡಿ ಹೊಟ್ಟೆ ತುಂಬಿಸುತ್ತಿದೆ.

ಕೇವಲ 10 ರೂಪಾಯಿಗೆ ಹೊಟ್ಟೆ ತುಂಬ ಊಟ..!

By

Published : Aug 24, 2019, 11:30 PM IST

ಯಾದಗಿರಿ:ಕಡಿಮೆ ಬೆಲೆಯಲ್ಲಿ ಜನರ ಹಸಿವು ನೀಗಿಸುವ ಉದ್ದೇಶದಿಂದ ಯಾದಗಿರಿಯ ಸಂತೃಪ್ತಿ ಕ್ಯಾಂಟೀನ್ ಕೇವಲ 10 ರೂಪಾಯಿ ದುಡ್ಡಿನಲ್ಲಿ ಊಟ‌ ನೀಡುತ್ತಿದೆ.

ಜಿಲ್ಲೆಯ ಶಹಾಪುರ ಪಟ್ಟಣದ ಸಂತೃಪ್ತಿ ಕ್ಯಾಂಟೀನ್ ದಿನನಿತ್ಯ ಸಾವಿರಾರು ಕಾರ್ಮಿಕರಿಗೆ ಕೇವಲ ಹತ್ತು ರೂಪಾಯಿನಲ್ಲಿ ಊಟ ನೀಡಿ ಬಡವರ ಹಸಿವು ನೀಗಿಸುತ್ತಿದೆ. ಶಹಾಪುರ ನಗರದ ಸೂಗುರೇಶ ಪಾಟೀಲ್ ನೇತೃತ್ವದ ಗೆಳೆಯರ ಬಳಗದಲ್ಲಿ ಸಂತೃಪ್ತಿ ಕ್ಯಾಂಟೀನ್ ಪ್ರಾರಂಭಿಸಲಾಗಿದ್ದು, ಸಾವಿರಾರು ಕೂಲಿ ಕಾರ್ಮಿಕರಿಗೆ ವರದಾನವಾಗಿದೆ.

ಕೇವಲ 10 ರೂಪಾಯಿಗೆ ಹೊಟ್ಟೆ ತುಂಬ ಊಟ..!

ಪ್ರತಿದಿನ ಕಾರ್ಮಿಕರು ಸರತಿ ಸಾಲಿನಲ್ಲಿ ನಿಂತುಕೊಂಡು ಉಪಹಾರ ಸೇವಿಸುತ್ತಾರೆ. ಮಧ್ಯಾಹ್ನದ ಸಮಯದಲ್ಲಿ ಆಲೂಬಾತ್, ಅನ್ನ ಸಾಂಬರ್ ಹೀಗೆ ವಿವಿಧ ರೀತಿಯಲ್ಲಿ ಕಾರ್ಮಿಕರಿಗೆ ಕೇವಲ ಹತ್ತು ರೂಪಾಯಿಯಲ್ಲಿ ಅನ್ನದಾನ ಮಾಡುತ್ತಿದ್ದಾರೆ. ಈ ಸಂತೃಪ್ತಿ ಕ್ಯಾಂಟೀನ್​​ಗೆ ನಗರ ಹಾಗೂ ದೋರನಳ್ಳಿ, ಖಾನಾಪುರ, ನಾಯ್ಕಲ್, ಗೋಗಿ, ಕೆಂಬಾವಿ ಹೀಗೆ ಬೇರೆ ಬೇರೆ ಹಳ್ಳಿಗಳಿಂದ ಕಾರ್ಮಿಕರು ಆಗಮಿಸಿ ಊಟ ಸವಿಯುತ್ತಾರೆ.

ABOUT THE AUTHOR

...view details