ಕರ್ನಾಟಕ

karnataka

ETV Bharat / state

ಯಾದಗಿರಿ ವೀಕೆಂಡ್ ಕರ್ಪ್ಯೂ ; ನಿಯಮ ಉಲ್ಲಂಘಿಸಿದವರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು - ನಿಯಮ ಉಲ್ಲಂಘಿಸಿದವರಿಗೆ ಲಾಟಿ ಚಾರ್ಜ್

ಬೆಳಗ್ಗೆಯಿಂದಲೇ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಪಿಎಸ್​ಐ ಸೌಮ್ಯ ರಾಣಿ ಸಿಟಿ ರೌಂಡ್ ಹಾಕುವ ಮೂಲಕ ಲಾಕ್ ಡೌನ್ ಉಲ್ಲಂಘಿಸಿದವರಿಗೆ ಶಾಕ್ ನೀಡಿದರು..

yadagir
yadagir

By

Published : Apr 25, 2021, 3:12 PM IST

Updated : Apr 25, 2021, 4:25 PM IST

ಯಾದಗಿರಿ :ಕೊರೊನಾ ವೈರಸ್ ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ವೀಕೆಂಡ್ ಕರ್ಪ್ಯೂ ಕೂಡ ಜಾರಿಗೊಳಿಸಿದೆ. ಆದ್ರೆ, ಸರ್ಕಾರದ ಲಾಕ್‌ಡೌನ್ ಉಲ್ಲಂಘಿಸಿ ರಸ್ತೆಗಿಳಿದ ಜನರಿಗೆ ಯಾದಗಿರಿಯಲ್ಲಿಂದು ಪೊಲೀಸರು ಲಾಠಿಚಾರ್ಜ್ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ನಗರದ ಸುಭಾಷ್ ವೃತ್ತ ಸೇರಿದಂತೆ ಹಲವೆಡೆ ಸರ್ಕಾರದ ನಿಯಮ ಪಾಲನೆ ಮಾಡದೆ ರಸ್ತೆಗಿಳಿದ ಜನರಿಗೆ ಲಾಠಿಚಾರ್ಜ್ ಮಾಡುವ ಮೂಲಕ ಬಿಸಿಲಿನಲ್ಲಿ ಬಿಸಿ ಬಿಸಿ ಲಾಠಿ ರುಚಿ ತೋರಿಸಿದ್ದಾರೆ. ಲಾಠಿ ಏಟಿಗೆ ಜನ ಸ್ಥಳದಿಂದ ಕಾಲ್ಕಿತ್ತು ಪರಾರಿಯಾದರು.

ನಿಯಮ ಉಲ್ಲಂಘಿಸಿದವರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

ಲಾಕ್​ಡೌನ್ ಉಲ್ಲಂಘಿಸಿ ಅಂಗಡಿ- ಮುಂಗಟ್ಟುಗಳನ್ನ ತೆರೆದ ಮಾಲೀಕರಿಗೆ ಅಧಿಕಾರಿಗಳು ದಂಡ ಹಾಕುವ ಮೂಲಕ ಎಚ್ಚರಿಕೆ ನೀಡಿದರು. ಈ ವೇಳೆ ಕೆಲ ಅಂಗಡಿ ಮಾಲೀಕರು ದಂಡ ಕಟ್ಟಲು ಕೂಡ ಹಣವಿಲ್ಲವೆಂದು ತಮ್ಮ ಅಳಲನ್ನ ತೋಡಿಕೊಂಡರು.

ಬೆಳಗ್ಗೆಯಿಂದಲೇ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಪಿಎಸ್​ಐ ಸೌಮ್ಯ ರಾಣಿ ಸಿಟಿ ರೌಂಡ್ ಹಾಕುವ ಮೂಲಕ ಲಾಕ್ ಡೌನ್ ಉಲ್ಲಂಘಿಸಿದವರಿಗೆ ಶಾಕ್ ನೀಡಿದರು. ವೀಕೆಂಡ್ ಕರ್ಪ್ಯೂ ನಿಯಮ ಪಾಲನೆ ಮಾಡದ ಅಂಗಡಿ-ಮುಂಗಟ್ಟುಗಳನ್ನ ಮುಚ್ಚಿಸಿದರು. ಅಂಗಡಿ ಮಾಲೀಕರಿಗೆ ದಂಡ ಕೂಡ ವಿಧಿಸಿದರು.

Last Updated : Apr 25, 2021, 4:25 PM IST

ABOUT THE AUTHOR

...view details