ಸುರಪುರ:ನಗರದಲ್ಲಿರುವ ಒಟ್ಟು 20 ಗ್ರಾಮ ಪಂಚಾಯಿತಿಗಳಲ್ಲಿ ಮತ ಎಣಿಕೆ ಕಾರ್ಯ ಶಾಂತಿಯುತವಾಗಿ ನಡೆಯುತ್ತಿದೆ. ಆದ್ರೆ ಎಣಿಕೆ ಕೇಂದ್ರವೊಂದರ ಬಳಿ ಸೇರಿದ ಜನರ ಗುಂಪನ್ನು ಪೊಲೀಸರು ಲಾಠಿ ಬೀಸಿ ಚದುರಿಸಿದರು.
ನಗರದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, 12 ಗಂಟೆಯವರೆಗೆ 10 ಜನ ಅಭ್ಯರ್ಥಿಗಳ ಫಲಿತಾಂಶ ಹೊರ ಬಂದಿದೆ.