ಕರ್ನಾಟಕ

karnataka

ETV Bharat / state

ಮನೆಗಳಿಗೆ ನುಗ್ಗಿದ ಕೆರೆಯ ನೀರು, ಜನಜೀವನ ಅಸ್ತವ್ಯಸ್ತ

ಕೆರೆಯ ನೀರು ಉಕ್ಕಿ ಗ್ರಾಮಗಳಿಗೆ ನುಗ್ಗಿದ್ದರಿಂದ ಸುಮಾರು ಹತ್ತು ಕುಟುಂಬ ಸಂಕಷ್ಟಕ್ಕೆ ಸಿಲುಕಿವೆ‌. ಮನೆಗಳಿಗೆ ನೀರು ನುಗ್ಗಿರುವುದರಿಂದ ಮನೆಯಲ್ಲಿರುವ ದವಸ-ಧಾನ್ಯಗಳು ಸೇರಿ ಎಲ್ಲಾ ವಸ್ತುಗಳು ಜಲಾವೃತವಾಗಿವೆ..

lake water rushing to houses in surpur
ಮನೆಗಳಿಗೆ ನುಗ್ಗಿದ ಕೆರೆಯ ನೀರು: ಜನಜೀವನ ಅಸ್ತವ್ಯಸ್ತ

By

Published : Sep 27, 2020, 10:35 PM IST

ಸುರಪುರ(ಯಾದಗಿರಿ):ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದ ಕೆರೆಯ ನೀರು ಉಕ್ಕಿ ಮನೆಗಳಿಗೆ ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಮನೆಗಳಿಗೆ ನುಗ್ಗಿದ ಕೆರೆಯ ನೀರು, ಜನಜೀವನ ಅಸ್ತವ್ಯಸ್ತ

ಕೆರೆಯ ನೀರು ಉಕ್ಕಿ ಗ್ರಾಮಗಳಿಗೆ ನುಗ್ಗಿದ್ದರಿಂದ ಸುಮಾರು ಹತ್ತು ಕುಟುಂಬ ಸಂಕಷ್ಟಕ್ಕೆ ಸಿಲುಕಿವೆ‌. ಮನೆಗಳಿಗೆ ನೀರು ನುಗ್ಗಿರುವುದರಿಂದ ಮನೆಯಲ್ಲಿರುವ ದವಸ-ಧಾನ್ಯಗಳು ಸೇರಿ ಎಲ್ಲಾ ವಸ್ತುಗಳು ಜಲಾವೃತವಾಗಿವೆ.

ಈ ವಿಷಯ ತಿಳಿದ ತಹಶೀಲ್ದಾರ್​ ನಿಂಗಣ್ಣ ಬಿರಾದಾರ್, ಕಂದಾಯ ಅಧಿಕಾರಿಗಳನ್ನು ಗ್ರಾಮಕ್ಕೆ ಕಳುಹಿಸಿ ಸಂತ್ರಸ್ತರಿಗೆ ಅಂಗನವಾಡಿ ಕೇಂದ್ರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವ ಜೊತೆಗೆ ಗಂಜಿ ಕೇಂದ್ರ ಆರಂಭಿಸುವಂತೆ ಸೂಚಿಸಿದ್ದಾರೆ.

ABOUT THE AUTHOR

...view details