ಯಾದಗಿರಿ: ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಬೆಳೆದ ಬಾಳೆ ಸಸಿಗಳು ಸಮರ್ಪಕ ವಿದ್ಯುತ್ ಸೌಲಭ್ಯವಿಲ್ಲದೇ ಸೊರಗುತ್ತಿದ್ದು ರೈತ ತಲೆ ಮೇಲೆ ಕೈ ಇಟ್ಟು ಅಸಹಾಯಕನಾಗಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಹಾಪುರ ತಾಲೂಕಿನ ಕೊಳ್ಳೂರ ಎಂ ಗ್ರಾಮದ ರೈತ ವಿರುಪಾಕ್ಷಯ್ಯ ಸ್ವಾಮಿ ತನ್ನ ಎರಡೂವರೆ ಎಕರೆ ಜಮೀನಿನಲ್ಲಿ ನಾಲ್ಕು ಲಕ್ಷ ರೂ. ಖರ್ಚು ಮಾಡಿ ಬಾಳೆ ತೋಟ ಮಾಡಿದ್ದಾರೆ. ಆ ತೋಟದಲ್ಲಿ ಸುಮಾರು ಮೂರುವರೆ ಸಾವಿರಕ್ಕೂ ಹೆಚ್ಚು ಬಾಳೆ ಸಸಿಗಳನ್ನು ನೆಟ್ಟಿದ್ದಾರೆ. ಆದ್ರೆ ವಿದ್ಯುತ್ ಕೊರತೆಯಿಂದ ಸಾವಿರಾರು ಬಾಳೆ ಸಸಿಗಳು ನೀರಿಲ್ಲದೆ ಒಣಗಿದ್ದು, ರೈತನ ಕೃಷಿ ಜೀವನಕ್ಕೆ ಮುಳುವಾಗಿದೆ.
ದಿನನಿತ್ಯ ಬಾಳೆ ಸಸಿಗಳ ಪಾಲನೆ-ಪೋಷಣೆ ಮಾಡುವ ಅವಶ್ಯಕತೆ ಇದ್ದು, ಸದ್ಯ ನೀರಿಲ್ಲದೇ ವಿರುಪಾಕ್ಷಯ್ಯರಿಗೆ ದಿಕ್ಕೆ ತೋಚದಂತಾಗಿದೆ. ಸಸಿಗಳನ್ನು ನೆಡುವ ಪೂರ್ವದಲ್ಲಿ ಮನದಲ್ಲಿ ಆಸೆಯ ಬೀಜ ಬಿತ್ತಿದ್ದೆ. ಆದ್ರೆ, ಬೆಳೆಯೂ ನಶಿಸುತ್ತಿದ್ದು, ನನ್ನ ನಿರೀಕ್ಷೆಯಾ ಮಾಸಿ ಹೋಗುತ್ತಿದೆ ಎಂದುರೈತ ವಿರುಪಾಕ್ಷಯ್ಯ ಅಳಲು ತೋಡಿಕೊಂಡಿದ್ದಾರೆ .