ಸುರಪುರ(ಯಾದಗಿರಿ):ತಾಲೂಕಿನ ಬೋನಾಳ ಗ್ರಾಮದಲ್ಲಿ ವಿಶ್ವ ಕಾರ್ಮಿಕರ ದಿನ ಆಚರಿಸುತ್ತಲೇ ಕರ್ನಾಟಕ ಪ್ರಾಂತ ಕೂಲಿಕಾರರ ಸಂಘವು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆ ಮಾಡಿ ವಿಶ್ವ ಕಾರ್ಮಿಕರ ದಿನ ಆಚರಿಸಿದ ಕರ್ನಾಟಕ ಪ್ರಾಂತ ಕೂಲಿಕಾರರ ಸಂಘ.. - Bonala of Surapur Taluk
ನಿತ್ಯ ದುಡಿದೇ ಜೀವನ ನಡೆಸುವ ಸಾವಿರಾರು ಕಾರ್ಮಿಕರ ಕುಟುಂಬಗಳು ಕಣ್ಣೀರು ಸುರಿಸುವಂತಾಗಿವೆ. ಆದ್ದರಿಂದ ಸರ್ಕಾರ ಎಲ್ಲಾ ಕಾರ್ಮಿಕರಿಗೆ ಪರಿಹಾರ ಧನ ನೀಡಬೇಕು ಮತ್ತು ಉದ್ಯೋಗ ಖಾತ್ರಿಯಡಿ ಕೆಲಸ ನೀಡಿ ದಿನಕ್ಕೆ 650 ರೂ. ಕೂಲಿ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ವೇಳೆ ಪ್ರಾಂತ ಕೂಲಿಕಾರರ ಸಂಘದವರು ಮೊದಲು ಸಂಘದ ಧ್ವಜಾರೋಹಣ ಮಾಡಿದರು. ಆನಂತರ ಜಯಘೋಷ ಕೂಗುವ ಬದಲು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.
ಈ ವೇಳೆ ಸಂಘದ ಅಧ್ಯಕ್ಷೆ ಸಿದ್ದಮ್ಮ ಭಜಂತ್ರಿ ಮಾತನಾಡಿ, ಲಾಕ್‌ಡೌನ್ ಕಾರಣದಿಂದ ಇಂದು ಎಲ್ಲಾ ಕಾರ್ಮಿಕರು ಸಂಕಷ್ಟ ಅನುಭವಿಸುವಂತಾಗಿದೆ. ಸರಿಯಾದ ಪಡಿತರ ವಿತರಣೆಯೂ ಇಲ್ಲವಾಗಿದೆ. ನಿತ್ಯವೂ ದುಡಿದೇ ಜೀವನ ನಡೆಸುವ ಸಾವಿರಾರು ಕಾರ್ಮಿಕರ ಕುಟುಂಬಗಳು ಕಣ್ಣೀರು ಸುರಿಸುವಂತಾಗಿವೆ. ಆದ್ದರಿಂದ ಸರ್ಕಾರ ಎಲ್ಲಾ ಕಾರ್ಮಿಕರಿಗೆ ಪರಿಹಾರ ಧನ ನೀಡಬೇಕು ಮತ್ತು ಉದ್ಯೋಗ ಖಾತ್ರಿಯಡಿ ಕೆಲಸ ನೀಡಿ ದಿನಕ್ಕೆ 650 ರೂ. ಕೂಲಿ ನೀಡಬೇಕೆಂದು ಆಗ್ರಹಿಸಿದರು.