ಸುರಪುರ: ತಾಲೂಕಿನ ಏವೂರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕೆಲಸ ನೀಡಲು ಪ್ರಾಂತ ಕೂಲಿಕಾರರ ಸಂಘದ ನೇತೃತ್ವದಲ್ಲಿ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಕೂಲಿ ಕಾರ್ಮಿಕರಿಂದ ಪ್ರತಿಭಟನೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ, ಕೂಲಿಕಾರರಿಗೆ 250 ದಿವಸ ಕೆಲಸ ಕೊಡಬೇಕು ಹಾಗೂ ದಿನಕ್ಕೆ 600 ರೂಪಾಯಿ ಕೂಲಿ ಕೊಡಲೇಬೇಕೆಂದು ಆಗ್ರಹಿಸಿದರು.
ಮೋದಿ ಯಡಿಯೂರಪ್ಪನ ಭಾಷಣ ಸಾಕು ನಮಗೆ ಆಹಾರ ಬೇಕು, ನಮ್ಮ ಕೂಲಿ ಹಣ ಸಂದಾಯ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 15 ದಿನಕ್ಕೊಮ್ಮೆ ಕೂಲಿಕಾರರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಮಹಿಳೆಯರೂ ಸೇರಿದಂತೆ ಅನೇಕ ಕಾರ್ಮಿಕರು ಸರ್ಕಾರ ಕೂಲಿ ಕಾರ್ಮಿಕರನ್ನು ಕಡೆಗಣಿಸಿವೆ. ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಮನವಿ ಮಾಡಿದರು.