ಕರ್ನಾಟಕ

karnataka

ETV Bharat / state

ಜಮಾವಣೆಯಾಗದ ಪರಿಹಾರ ಧನ: ಕಚೇರಿಗೆ ಅಲೆಯುತ್ತಿರುವ ಕಾರ್ಮಿಕರು - ಸುರಪುರ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರ ಘೋಷಿಸಿದ 5 ಸಾವಿರ ರೂ.ಗಳ ಸಹಾಯ ಧನಕ್ಕಾಗಿ ಕಾರ್ಮಿಕರು ಕಚೇರಿಗಳಿಗೆ ಅಲೆಯುತ್ತಿದ್ದಾರೆ.

labor  appeal fo giving Relief Fund
ಪರಿಹಾರ ಧನಕ್ಕಾಗಿ ಕಚೇರಿಗೆ ಅಲೆದಾಡುತ್ತಿರುವ ಕಾರ್ಮಿಕರು

By

Published : Jun 2, 2020, 10:34 PM IST

ಸುರಪುರ: ಲಾಕ್​ಡೌನ್​ ಹಿನ್ನೆಲೆ ಕಾರ್ಮಿಕರ ಜೀವನೋಪಾಯಕ್ಕಾಗಿ ಸರ್ಕಾರ 5000 ರೂ. ಸಹಾಯ ಧನ ಘೋಷಣೆ ಮಾಡಿತ್ತು. ರಾಜ್ಯ ಸರ್ಕಾರ ಸಹಾಯ ಧನ ಘೋಷಣೆ ಮಾಡಿದ ನಂತರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಅರ್ಜಿ ಹಾಕಿ ತಮ್ಮ ಹಣ ಜಮಾ ಆಗದೇ ಇರುವುದರಿಂದ ಕಚೇರಿಗೆ ಅಲೆದಾಟ ಆರಂಭಿಸಿದ್ದಾರೆ.

ನಗರದಲ್ಲಿರುವ ಕಾರ್ಮಿಕ ಕಚೇರಿ ಮುಂದೆ ಸಾಲುಗಟ್ಟಿ ನಿಂತಿರುವ ಕಾರ್ಮಿಕರು ಸರ್ಕಾರ ಸಹಾಯ ಧನ ಘೋಷಿಸಿದೆ. ಆದರೆ ನಮ್ಮ ಖಾತೆಗೆ ಯಾವುದೇ ಹಣ ಜಮಾ ಆಗಿಲ್ಲ. ಕೆಲಸವಿಲ್ಲದೆ ಜೀವನ ನಡೆಸಲು ತೊಂದರೆಯಾಗುತ್ತಿದೆ ಎಂದು ಅಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ABOUT THE AUTHOR

...view details