ಯಾದಗಿರಿ:ಜಿಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದು, ಜಾನುವಾರಗಳು ಕಸಾಯಿಖಾನೆಗೆ ತೆರಳುತ್ತಿವೆ. ಇದನ್ನು ನೋಡಿಯೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
ಬರ ಪರಿಶೀಲನೆಗೆಂದು ಜಿಲ್ಲೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದೆ. ಗೋಶಾಲೆಗಳನ್ನು ತೆರೆಯದಿರುವ ಹಿನ್ನೆಲೆ ಜಾನುವಾರುಗಳು ಅಸುನೀಗುತ್ತಿವೆ. ಅಕ್ರಮವಾಗಿ ಜಾನುವಾರಗಳು ಕಸಾಯಿಖಾನೆಗೆ ಹೋಗುತ್ತಿದ್ದರು ಸರ್ಕಾರ ಮಾತ್ರ ಕಣ್ಣುಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.