ಕರ್ನಾಟಕ

karnataka

ಕೃಷ್ಣೆಯಲ್ಲಿ ಹೆಚ್ಚಾದ ನೀರಿನಿಂದ ತತ್ತರಿಸುತ್ತಿರುವ ಪ್ರಾಣಿಗಳು

By

Published : Sep 10, 2019, 5:17 AM IST

Updated : Sep 10, 2019, 6:34 AM IST

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಲ್ಲಿ ಒಳ ಹರಿವು  ಹೆಚ್ಚಾದ ಹಿನ್ನಲೆ ಕೆಬಿಜೆಎನ್ಎಲ್ ಅಧಿಕಾರಿಗಳು ಕೃಷ್ಣ ನದಿಗೆ ನೀರು ಹರಿಬಿಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾದ ಪರಿಣಾಮ ಬಸವ ಸಾಗರ ಜಲಾಶಯಕ್ಕೆ ಆಲಮಟ್ಟಿ ಜಲಾಶಯದಿಂದ ನೀರು ಹರಿಬಿಡಲಾಗುತ್ತಿದೆ. ಪರಿಣಾಮ ನೀರಿನ ರಭಸದಿಂದ ಜಲಚರ ಪ್ರಾಣಿಗಳು , ಉಭಯವಾಸಿ ಪ್ರಾಣಿಗಳು ತಮ್ಮ ಜೀವನದ ದಾರಿಯ ದಿಕ್ಕನ್ನೇ ತಪ್ಪಿಸಿಕೊಂಡು ಜೀವವನ್ನು ಉಳಿಸಿಕೊಳ್ಳುವುದಕ್ಕಾಗಿ ಪರದಾಡುತ್ತಿವೆ.

ಕೃಷ್ಣೆ ನೀರು ಹೆಚ್ಚಳ;ಪ್ರಾಣಿಗಳು ಪಾಡು ತತ್ತರ

ಯಾದಗಿರಿ : ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಲ್ಲಿ ಒಳ ಹರಿವು ಹೆಚ್ಚಾದ ಹಿನ್ನಲೆ ಕೆಬಿಜೆಎನ್ಎಲ್ ಅಧಿಕಾರಿಗಳು ಕೃಷ್ಣ ನದಿಗೆ ನೀರು ಹರಿಬಿಡುತ್ತಿರುವುದರಿಂದ ಪ್ರಾಣಿಗಳು ತತ್ತರಿಸುವಂತಾಗಿದೆ.

ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾದ ಪರಿಣಾಮ ಬಸವ ಸಾಗರ ಜಲಾಶಯಕ್ಕೆ ಆಲಮಟ್ಟಿ ಜಲಾಶಯದಿಂದ ನೀರು ಹರಿಬಿಡಲಾಗುತ್ತಿದೆ. ಪರಿಣಾಮ ನೀರಿನ ರಭಸದಿಂದ ಜಲಚರ ಪ್ರಾಣಿಗಳು ,ಉಭಯವಾಸಿ ಪ್ರಾಣಿಗಳು ತಮ್ಮ ಜೀವನದ ದಾರಿಯ ದಿಕ್ಕನ್ನೇ ತಪ್ಪಿಸಿಕೊಂಡು ಜೀವವನ್ನು ಉಳಿಸಿಕೊಳ್ಳುವುದಕ್ಕಾಗಿ ಪರದಾಡುತ್ತಿವೆ.

ಕೃಷ್ಣಾ ನದಿ

ಈ ಮಧ್ಯೆ ಶಹಾಪುರ ತಾಲೂಕಿನ ಕೌಳೂರ ಬ್ರಿಜ್ಡ್ ನಲ್ಲಿ ಉಭಯವಾಸಿ ಪ್ರಾಣಿಯಾದ ಊಡ ಪ್ರಾಣಿಯು ನೀರಿನ ರಭಸಕ್ಕೆ ಈಜಾಡಲಾಗದೆ ಸುಸ್ತಾಗಿ ಬ್ರಿಜ್ಡ್ ನ ಕಂಬದ ಮೇಲೆ ತೇಲಿ ಬಂದು ವಿಶ್ರಾಂತಿ ಪಡೆಯುತ್ತಿರುವುದು ಜನರಿಗೆ ಮನರಂಜನೆ ನೀಡುವಂತಾಗಿತ್ತು.

Last Updated : Sep 10, 2019, 6:34 AM IST

ABOUT THE AUTHOR

...view details