ಯಾದಗಿರಿ: ಕಾಂಗ್ರೆಸ್ ಪಕ್ಷದ ನೂತನ ರಾಜ್ಯಾಧ್ಯಕ್ಷರ ಪಟ್ಟಾಭಿಷೇಕದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗಮಿಸಿದ್ದರು. ಈ ವೇಳೆ, ಅವರು ಸಾಮಾಜಿಕ ಅಂತರ ಉಲ್ಲಂಘಿಸುವ ಮೂಲಕ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣರಾದರು.
ಯಾದಗಿರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗಮನ: ಸಾಮಾಜಿಕ ಅಂತರ ಉಲ್ಲಂಘನೆ
ಕೆಪಿಸಿಸಿ ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಪೂರ್ವಭಾವಿ ಸಭೆಗೆ ಈಶ್ವರ ಖಂಡ್ರೆ ಆಗಮಿಸಿದ್ದರು. ಈ ವೇಳೆ, ಅವರನ್ನ ಭೇಟಿ ಆಗಲು ಕಾರ್ಯಕರ್ತರು ಮುಗಿ ಬೀಳುವ ಮೂಲಕ ಸಾಮಾಜಿಕ ಅಂತರ ಮರೆಮಾಚಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಕೆಪಿಸಿಸಿ ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಪೂರ್ವಭಾವಿ ಸಭೆಗೆ ಈಶ್ವರ ಖಂಡ್ರೆ ಆಗಮಿಸಿದ್ದರು. ಈ ಸಭೆಯಲ್ಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ, ಎಂಎಲ್ಸಿ ತಿಪ್ಪಣಪ್ಪ ಕಮಕನೂರ, ಜಿಲ್ಲಾಧ್ಯಕ್ಷ ಮರಿಗೌಡ, ಮಾಜಿ ಎಂಎಲ್ಸಿ ಚನ್ನಾರೆಡ್ಡಿ ತನ್ನೂರ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಈ ವೇಳೆ ಕಾರ್ಯಾ ಧ್ಯಕ್ಷ ಈಶ್ವರ ಖಂಡ್ರೆ ಅವರನ್ನ ಭೇಟಿ ಆಗಲು ಕಾರ್ಯಕರ್ತರು ಮುಗಿ ಬೀಳುವ ಮೂಲಕ ಸಾಮಾಜಿಕ ಅಂತರ ಮರೆಮಾಚಿದರು.
ಇದರಲ್ಲಿ ಕೆಲ ಕಾರ್ಯಕರ್ತರು ಮಾಸ್ಕ್ ಕೂಡ ಧರಿಸದೇ ಸಾಮಾಜಿಕ ಅಂತರ ಗಾಳಿಗೆ ತೂರಿ ಆತಂಕ ಸೃಷ್ಟಿ ಮಾಡಿದರು. ಯಾದಗಿರಿ ಜಿಲ್ಲೆಯಲ್ಲಿಯೂ ಕೊರೊನಾ ವೈರಸ್ನ ರಣಕೇಕೆ ಮುಂದುವರೆದಿದ್ದು, ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಈ ನಡೆಗೆ ಜಿಲ್ಲಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ.