ಕರ್ನಾಟಕ

karnataka

ETV Bharat / state

ಕಿತ್ತೂರು ಚೆನ್ನಮ್ಮ ವಸತಿ ಶಾಲೆಯಲ್ಲಿ ಊಟ ಸಿಗದೆ ವಿದ್ಯಾರ್ಥಿನಿಯರು ಅಸ್ವಸ್ಥ - ಕಿತ್ತೂರು ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು

ಯಾದಗಿರಿಯ ಮಂಡರಗಿಯಲ್ಲಿನ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯಲ್ಲಿ 6 ವಿದ್ಯಾರ್ಥಿನಿಯರು ಊಟ ಸಿಗದೆ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

Kittur chennamma school students are admitted for hospital
ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿಯರು

By

Published : Nov 1, 2021, 8:58 PM IST

ಯಾದಗಿರಿ:ಸರಿಯಾಗಿ ಊಟ ಸಿಗದೆ ಬಾಲಕಿಯರು ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಡರಗಿಯಲ್ಲಿನ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ.

ಊಟ ಸಿಗದೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿಯರು

ಕಳೆದೊಂದು ವಾರದಿಂದ ವಸತಿ ಶಾಲೆಯಲ್ಲಿ ಸಿಬ್ಬಂದಿ ಊಟ ನೀಡದ ಹಿನ್ನೆಲೆಯಲ್ಲಿ ಆರು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವಸತಿ ಶಾಲೆಯ ಸಿಬ್ಬಂದಿ ಊಟ ನೀಡದಿರುವುದೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸರಿಯಾಗಿ ಊಟ ಮಾಡದ ಕಾರಣ ಬಾಲಕಿಯರ ಆರೋಗ್ಯದಲ್ಲಿ ಏರುಪೇರಾಗಿತ್ತು. ಚಿಕಿತ್ಸೆ ನೀಡಲಾಗಿದೆ, ಈಗ ಯಾವುದೆ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಹುಳು ಹತ್ತಿದ್ದ ಅವಲಕ್ಕಿ ಉಪ್ಪಿಟ್ಟು, ಹಸಿಬಿಸಿ ಅನ್ನ, ಉಪ್ಪುಖಾರವಿಲ್ಲದ ಸಾಂಬಾರು.. ಹೀಗೆ ಶಾಲೆಯಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುವ ಬಗ್ಗೆ ವಿದ್ಯಾರ್ಥಿಗಳು ಮಹಿಳಾಧಿಕಾರಿ ಎದುರು ನೋವು ತೋಡಿಕೊಂಡಿದ್ದಾರೆ. ಈ ಸಂಬಂಧ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಕೊರೊನಾ ಇಳಿಕೆ: ಇಂದು 188 ಮಂದಿಗೆ ಸೋಂಕು, ಇಬ್ಬರು ಸಾವು

ABOUT THE AUTHOR

...view details