ಕರ್ನಾಟಕ

karnataka

ETV Bharat / state

ಸ್ಮಶಾನ ಜಾಗಕ್ಕಾಗಿ ಕಿರಿಕ್​​​... ಸವರ್ಣೀಯರಿಂದ ದಲಿತರ ಮೇಲೆ ಹಲ್ಲೆ ಆರೋಪ - ydr smashana galate

ಸ್ಮಶಾನದ ಜಾಗಕ್ಕಾಗಿ ಸವರ್ಣೀಯರು ಮತ್ತು ದಲಿತರ ನಡುವೆ ಗಲಾಟೆ ನಡೆದಿರುವಂತಹ ಘಟನೆ ಯಾದಗಿರಿ ತಾಲೂಕಿನ ಕಾಡಂಗೇರಾ ಗ್ರಾಮದಲ್ಲಿ ನಡೆದಿದೆ.

ಯಾದಗಿರಿ ಗಲಾಟೆ

By

Published : Feb 6, 2019, 12:26 PM IST

ಯಾದಗಿರಿ: ಸ್ಮಶಾನ ಭೂಮಿ ವಿಚಾರದಲ್ಲಿ ಶುರುವಾದ ಜಗಳ ಕೈ ಕೈ ಮಿಲಾಯಿಸುವವರೆಗೂ ಹೋಗಿದ್ದು, ಸವರ್ಣೀಯರು ದಲಿತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಯಾದಗಿರಿ ತಾಲೂಕಿನ ಕಾಡಂಗೇರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ ಸಾರ್ವಜನಿಕ ಹಾಗೂ ದಲಿತರ ಉಪಯೋಗಕ್ಕಾಗಿ ಸ್ಮಶಾನ ಹಾಗೂ ಅಂಬೇಡ್ಕರ್​ ಭವನ ನಿರ್ಮಾಣ ಮಾಡಲು ಜಿಲ್ಲಾಡಳಿತ ಭೂಮಿ ಮಂಜೂರು ಮಾಡಿತ್ತು ಎನ್ನಲಾಗಿದೆ.

ಮಂಜೂರಾದ ರುದ್ರ ಭೂಮಿಯನ್ನು ವಿರೋಧಿಸಿ ಗ್ರಾಮದ ಕೆಲವು ಪ್ರಮುಖರು ದಲಿತ ಸಮುದಾಯದವರ ಜೊತೆ ವೈಷ್ಯಮ್ಯ ಬೆಳೆಸಿಕೊಂಡು, ಮಂಜೂರಾದ ಭೂಮಿಯಲ್ಲಿ ಸವರ್ಣೀಯರು ಅಕ್ರಮವಾಗಿ ಮರಳನ್ನು ಸಂಗ್ರಹಿಸಿ ಶೆಡ್​ ನಿರ್ಮಾಣ ಮಾಡಿದ್ದರು ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಸಂಗ್ರಹಿಸಿದ ಮರಳು ಹಾಗೂ ಶೆಡ್​ ತೆರವುಗೊಳಿಸುವಂತೆ ದಲಿತರು ಸವರ್ಣೀಯರಿಗೆ ಹೇಳಿದ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಯಾದಗಿರಿಯ ವಡಗೇರಾ ಪೊಲೀಸ್​ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

For All Latest Updates

ABOUT THE AUTHOR

...view details