ಯಾದಗಿರಿ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮನರೇಗಾ ಯೋಜನೆಯಡಿ ಸಿಎಫ್ಪಿ ಸಿಬ್ಬಂದಿ ನೇಮಕಾತಿಗೆ ನಿರ್ಧರಿಸಲಾಗಿದೆ. ಖಾಲಿ ಇರುವ ಒಟ್ಟು 10 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಹೊರಗುತ್ತಿಗೆ ಮೇರೆಗೆ ಭರ್ತಿ ನಡೆಯಲಿದೆ.
ಹುದ್ದೆಗಳೇನು? : ಜಿಲ್ಲಾ ಕೋ ಆರ್ಡಿನೇಟರ್- 1, ಜಿಲ್ಲಾ ಜಿಐಎಸ್ ಎಕ್ಸ್ಪರ್ಟ್- 1, ಜಿಐಎಸ್ ಕೋಆರ್ಡಿನೇಟರ್- 2, ಬ್ಲಾಕ್ ಎನ್ಆರ್ಎಂ ಎಕ್ಸ್ಪರ್ಟ್- 3 ಮತ್ತು ಬ್ಲಾಕ್ ಲೈವ್ಲಿಹುಡ್ ಎಕ್ಸ್ಪರ್ಟ್- 3 ಹುದ್ದೆಗಳು.
ವಿದ್ಯಾರ್ಹತೆ: ಜಿಲ್ಲಾ ಕೋ ಆರ್ಡಿನೇಟರ್, ಜಿಲ್ಲಾ ಜಿಐಎಸ್ ಎಕ್ಸ್ಪರ್ಟ್, ಬ್ಲಾಕ್ಸ್ ಜಿಐಎಸ್ ಕೊಆರ್ಡಿನೇಟರ್ ಹುದ್ದೆಗಳಿಗೆ ಅಭ್ಯರ್ಥಿಗಳು ಬಿಇ ಅಥವಾ ಬಿಟೆಕ್ ಪದವಿ ಮಾಡಿರಬೇಕು. ಬ್ಲಾಕ್ ಎನ್ಆರ್ಎಂ ಎಕ್ಸ್ಪರ್ಟ್ ಹುದ್ದೆಗಳಿಗೆ ಸಿವಿಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಅಥವಾ ಬಿಟೆಕ್ ಪದವಿ, ಬ್ಲಾಕ್ ಲೈವ್ಲಿಹುಡ್ ಎಕ್ಸ್ಪರ್ಟ್ ಹುದ್ದೆಗೆ ಸ್ನಾತಕೋತ್ತರ ಪದವಿ ಪೂರೈಸಿರಬೇಕು. ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 2 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಹೊಂದಿರಬೇಕು.
ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 45 ವರ್ಷ.