ಯಾದಗಿರಿ: ಸಿಎಂ ಯಡಿಯೂರಪ್ಪ ವಾಹನಕ್ಕೆ ಮುತ್ತಿಗೆ ಹಾಕಿದ ಜೆಡಿಎಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ ಘಟನೆ ನಗರದ ಸುಭಾಷ್ ವೃತ್ತದ ಬಳಿ ನಡೆದಿದೆ.
ಸಿಎಂ ಯಡಿಯೂರಪ್ಪ ವಾಹನಕ್ಕೆ ಮುತ್ತಿಗೆ
ಯಾದಗಿರಿ: ಸಿಎಂ ಯಡಿಯೂರಪ್ಪ ವಾಹನಕ್ಕೆ ಮುತ್ತಿಗೆ ಹಾಕಿದ ಜೆಡಿಎಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ ಘಟನೆ ನಗರದ ಸುಭಾಷ್ ವೃತ್ತದ ಬಳಿ ನಡೆದಿದೆ.
ಉದ್ದೇಶಪೂರ್ವಕವಾಗಿ ಗುರುಮಿಠಕಲ್ ಕ್ಷೇತ್ರಕ್ಕೆ ಅನುದಾನ ರದ್ದು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್ ಕಾರ್ಯಕರ್ತರು ಸಿಎಂ ಕಾರಿಗೆ ಮುತ್ತಿಗೆ ಹಾಕಿದ್ರು.
ಈ ವೇಳೆ ಕಾರ್ಯಕರ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ ಪೊಲೀಸರು, ಕೆಲವರನ್ನು ವಶಕ್ಕೆ ಪಡೆದರು.