ಸುರಪುರ: ಶಿಬಾರಬಂಡಿ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶಿಬಾರಬಂಡಿ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಆಗ್ರಹಿಸಿ ಪ್ರತಿಭಟನೆ - ಸುರಪುರದಲ್ಲಿ ಪ್ರತಿಭಟನೆ
ಸುರಪುರ ತಾಲೂಕಿನ ಖಾನಾಪುರ ಎಸ್.ಹೆಚ್. ಗ್ರಾಮ ಪಂಚಾಯಿತಿ ಮುಂದೆ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸುರಪುರ ತಾಲೂಕಿನ ಖಾನಾಪುರ್ ಎಸ್.ಹೆಚ್. ಗ್ರಾಮ ಪಂಚಾಯಿತಿ ಮುಂದೆ ಜಯಕರ್ನಾಟಕ ಸಂಘಟನೆಯ ಸುರಪುರ ತಾಲೂಕು ಅಧ್ಯಕ್ಷ ರವಿ ನಾಯಕ ಬೈರಿಮರಡಿ ಹಾಗೂ ನಗರ ಘಟಕ ಅಧ್ಯಕ್ಷ ಮಲ್ಲು ನಾಯಕ ಕಬಾಡಗೇರಾ ಇವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಖಾನಾಪುರ ಎಸ್.ಹೆಚ್. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಬರಬಂಡಿ ಗ್ರಾಮಕ್ಕೆ ಮೂಲ ಸೌಕರ್ಯಗಳಾದ ನೀರು, ವಿದ್ಯುತ್ ದೀಪ, ಶೌಚಾಲಯ ರೋಡ್ ಒದಗಿಸಬೇಕು. ಒಂದು ವಾರದೊಳಗೆ ಮನವಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಬರೆದ ಮನವಿಯನ್ನು ಪಂಚಾಯಿತಿ ಸಿಬ್ಬಂದಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುರಪುರ ಕಾರ್ಯಾಧ್ಯಕ್ಷ ಶರಣು ಬೈರಮರಡಿ, ನಗರ ಘಟಕ ಕಾರ್ಯಾಧ್ಯಕ್ಷ ಯಲ್ಲಪ್ಪ ಕಲ್ಲೋಡಿ, ನಗರ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಗೋಗಿಕರ್, ರವಿ ಹುಲಕಲ್ಲ್, ಶಿಬರಬಂಡಿ ಗ್ರಾಮ ಘಟಕದ ಅಧ್ಯಕ್ಷ ಅಂಬ್ರೇಶ್ ಪೂಜಾರಿ ಹಾಗೂ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.