ಯಾದಗಿರಿ:ಪ್ರಿಯಾಂಕ ಖರ್ಗೆ ಅವರ ಬಳಿ ದಾಖಲೆಗಳಿದ್ದಲ್ಲಿ ತನಿಖಾಧಿಕಾರಿಗಳಿಗೆ ನೀಡಲಿ. ಕೇವಲ ಆರೋಪ ಮಾಡುವುದರಿಂದ ಏನು ಪ್ರಯೋಜನ ಇಲ್ಲ. ಗಾಳಿಯಲ್ಲಿ ಗುಂಡು ಹಾರಿಸಿದಂತೆ ಮಾತನಾಡುವ ಬದಲು ಸಾಕ್ಷೀಕರಿಸಲಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಯಾದಗಿರಿಯಲ್ಲಿ ಸೋಮವಾರ ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ವಿಧಾನಸೌಧದಲ್ಲಿರುವವರಿಗೂ ದುಡ್ಡು ಮುಟ್ಟಿದೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಪ್ರಿಯಾಂಕ್ ಖರ್ಗೆ ಅವರದ್ದು ಬೆಳಗಿನಿಂದ ಸಾಯಂಕಾಲದ ತನಕ ಇದೇ ಆಯ್ತು. ಸಿಐಡಿ ತನಿಖೆಯಲ್ಲಿ ಯಾವುದಾದರೂ ಒಂದು ಸಣ್ಣ ಸಾಕ್ಷಿ ಅವರು (ಪ್ರಿಯಾಂಕ) ಕೊಟ್ಟಿದ್ದಾರಾ ? ಎಂದು ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿರುವವರ ಹೆಸರು ಹೇಳೋ ಧೈರ್ಯ ಪ್ರಿಯಾಂಕ್ ಖರ್ಗೆಗೆ ಇದೆಯಾ ಪಿಎಸ್ಐ ಮರು ಪರೀಕ್ಷೆಯನ್ನು ಸಮರ್ಥಿಸಿಕೊಂಡ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಪ್ರಶ್ನೆಪತ್ರಿಕೆ ಲೀಕ್ ಆದಾಗ ಇಡೀ ಪರೀಕ್ಷೆ ರದ್ದು ಮಾಡಿರುವುದು ಸಾಕಷ್ಟಿದೆ. ಕೆಲವರು ಮಾಡುವ ತಪ್ಪಿನಿಂದ ಉಳಿದವರು ಸಮಸ್ಯೆ ಎದುರಿಸುವಂತಾಗಿದೆ. 545 ಕ್ಕಿಂತ 54 ಸಾವಿರ ಜನ ಇದ್ದಾರೆ, ಇವರದ್ದು ಅಕ್ರಮ ನಡೆದಿದೆ ಅಂತ ಅವರು ಹೇಳ್ತಾರೆ. ಇದು ಎಲ್ಲ ಕಡೆ ವಾದ - ವಿವಾದ ಇರುವುದೇ. ಸಿಐಡಿ ಅವರು ಅಕ್ರಮ, ಭ್ರಷ್ಟಾಚಾರ ಆಗಿದೆ ಎಂದು ಮಧ್ಯಂತರ ವರದಿ ಕೊಟ್ಟಿದ್ದಾರೆ. ಆ ಆಧಾರದಲ್ಲಿ ಸರ್ಕಾರ ಮರು ಪರೀಕ್ಷೆಯ ನಿರ್ಧಾರ ಕೈಗೊಂಡಿದೆ, ಮರು ಪರೀಕ್ಷೆಯ ಆದೇಶ ತಪ್ಪಿಲ್ಲ ಎಂದು ಅವರು ಸರ್ಕಾರದ ಆದೇಶವನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ:ವಿಜಯ್ ಬಾಬು ಅತ್ಯಾಚಾರ ಕೇಸ್: 'ಅಮ್ಮ' ಸಂಘಕ್ಕೆ ನಟಿ ಮಾಲಾ ಪಾರ್ವತಿ ರಾಜೀನಾಮೆ