ಯಾದಗಿರಿ: ಕಾಲಕ್ಕೆ ತಕ್ಕಂತೆ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಆರೋಪ ಮಾಡ್ತಿದ್ದು, ಇದಕ್ಕೆ ಅರ್ಥವಿಲ್ಲ. ಅವರ ಸರ್ಕಾರ ಡ್ರಗ್ಸ್ ಮಾಫಿಯಾದಿಂದ ಉರುಳಿದೆ ಎಂದು ಅಂದೇ ಹೇಳಬೇಕಿತ್ತಲ್ಲ, ಇವಾಗ ನೆನಪಾಯ್ತಾ ಅವ್ರಿಗೆ ಎಂದು ಸಚಿವ ಜಗದೀಶ್ ಶೆಟ್ಟರ್ ಟಾಂಗ್ ನೀಡಿದ್ದಾರೆ.
ಜಿಲ್ಲೆಯ ಕಡೆಚುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬಣ ಮತ್ತು ಕಾಂಗ್ರೆಸ್ನ ಕೆಲ ಗುಂಪುಗಳು ತಂತ್ರಗಾರಿಕೆ ಮಾಡುವ ಮೂಲಕ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನ ಮಾಡಿದ್ದರು ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಈಗ ಡ್ರಗ್ಸ್ ಮಾಫಿಯಾದಿಂದ ತಮ್ಮ ಸರ್ಕಾರ ಬಿತ್ತು ಎನ್ನುತ್ತಿರುವುದು ಹಾಸ್ಯಾಸ್ಪದ ಎಂದರು.