ಕರ್ನಾಟಕ

karnataka

ETV Bharat / state

ಇಷ್ಟಲಿಂಗ ಪೂಜೆ ಮೂಲಕ ಕೊರೊನಾ ನಿರ್ಮೂಲನೆಗೆ ಪ್ರಾರ್ಥನೆ - ಕೊರೊನಾ ನಿರ್ಮೂಲನೆಗೆ ಲಿಂಗ ಪೂಜೆ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಿಂದೆ ಕೊರೊನಾ ನಿರ್ಮೂಲನೆಗೆ ಶ್ರಮಿಸುತ್ತಿರುವ ವೈದ್ಯರು ಪೊಲೀಸ್ ಮತ್ತು ಇತರ ಎಲ್ಲ ರಂಗದವರಿಗೆ ದೇಶದ ಜನ ಗೌರವ ಸಲ್ಲಿಸಲು ಚಪ್ಪಾಳೆ ತಟ್ಟಿದ್ದಾಯ್ತು, ನಂತರದಲ್ಲಿ ದೀಪ ಬೆಳಗಿಸಿದ್ದಾಯ್ತು, ಅದರಂತೆ ನಿನ್ನೆ ಇಷ್ಟಲಿಂಗ ಪೂಜೆ ಮೂಲಕ ಕೊರೊನಾ ನಿರ್ಮೂಲನೆಗೆ ಪ್ರಾರ್ಥನೆ ಕೂಡ ಸಲ್ಲಿಸಲಾಯಿತು.

Abolition corona
ಇಷ್ಟಲಿಂಗ ಪೂಜೆ

By

Published : Apr 14, 2020, 4:08 PM IST

ಸುರಪುರ: ದೇಶದಲ್ಲಿನ ಇಷ್ಟಲಿಂಗದಾರಿ ಸ್ವಾಮೀಜಿಗಳು ಮತ್ತು ಲಿಂಗಾಯತ ಜನರು ನಿನ್ನೆ ಸಂಜೆ 7 ಗಂಟೆಗೆ ಕರೆ ನೀಡಿದ್ದ ಇಷ್ಟಲಿಂಗ ಪೂಜೆ ಮೂಲಕ ಕೊರೊನಾ ನಿರ್ಮೂಲನೆಗೆ ಪ್ರಾರ್ಥನೆ ಸಲ್ಲಿಸಲಾಯಿತು.

ತಾಲೂಕಿನ ಹೆಸರಾಂತ ಮಠಗಳಲ್ಲಿ ಒಂದಾದ ತಾಲೂಕಿನ ಕರಡಕಲ್ ಗ್ರಾಮದ ನಾಲವಾರ ಕೋರಿಸಿದ್ದೇಶ್ವರರ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಎರಡು ವರ್ಷದ ಮಗು ವಚನ ಆರ್‌.ಕುಂಬಾರ ಇಷ್ಟಲಿಂಗ ಧ್ಯಾನಿಸುವ ಮೂಲಕ ಕೊರೊನಾ ನಿರ್ಮೂಲನೆಗೆ ಪ್ರಾರ್ಥಿಸಲಾಗಿದೆ.

ಇಷ್ಟಲಿಂಗ ಪೂಜೆ ಮೂಲಕ ಕೊರೊನಾ ನಿರ್ಮೂಲನೆಗೆ ಪ್ರಾರ್ಥನೆ

ಅನೇಕ ಜನರು ಕೂಡ ಇಷ್ಟಲಿಂಗ ಪೂಜೆಯ ಮೂಲಕ ಕೊರೊನಾ ನಿರ್ಮೂಲನೆಗೆ ಪ್ರಾರ್ಥನೆ ಮಾಡಿದ್ದಾರೆ. ಭಾರತ ಎಂಬುದು ವಿವಿಧ ಸಂಸ್ಕೃತಿ ಮತ್ತು ಆಚರಣೆಗಳ ದೇಶವಾಗಿದ್ದು, ಇಷ್ಟಲಿಂಗ ಧರಿಸಿದವರು ದೇಶದಲ್ಲಿನ ಕೊರೊನಾ ನಿರ್ಮೂಲನೆಗಾಗಿ ಮಾಡಿದ ಪ್ರಾರ್ಥನೆ ಫಲ ಎಷ್ಟರ ಮಟ್ಟಿಗೆ ಫಲಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details