ಯಾದಗಿರಿ :ಜಿಲ್ಲೆಯ ನಾರಾಯಣಪುರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಕಾಲುವೆ ಮೂಲಕ ಬೆಳೆಗೆ ಪೂರ್ಣಾವಧಿವರೆಗೂ ನೀರು ಹರಿಸಬೇಕೆಂದು ರೈತರು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಇಂದು ಆಲಮಟ್ಟಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮಹತ್ವದ ನೀರಾವರಿ ಸಲಹಾ ಸಮಿತಿಯಿಂದ ಸಭೆ ನಡೆಯಲಿದೆ.
ಉಪ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದ್ದು, ರಾಯಚೂರು, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯ ಎಲ್ಲ ಶಾಸಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜಲಾಶಯ ತುಂಬಿದ್ದರಿಂದ ಹಿಂಗಾರು ಬೆಳೆಗೆ ಸಂಪೂರ್ಣ ನೀರು ಹರಿಸಬೇಕು. ವಾರಬಂದಿ ನೀತಿಯನ್ನ ಕೈ ಬಿಟ್ಟು ಏ.30 ರವರೆಗೆ ನೀರು ಹರಿಸಬೇಕು ಎಂದು ಜಿಲ್ಲೆಯ ರೈತರು ಒತ್ತಾಯಿಸಿದ್ದಾರೆ.