ಗುರುಮಠಕಲ್: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಭಕ್ತಿ, ಶ್ರದ್ಧೆಯಿಂದ ದೇವರ ಆರಾಧನೆ ಮಾಡುವುದರಿಂದ ಮನಸ್ಸು ಪ್ರಸನ್ನತೆ ಪಡೆಯುವುದು. ಇದೇ ಬದುಕಿನ ಸಾರ್ಥಕತೆಯ ಮಾರ್ಗ ಎಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಹೇಳಿದರು.
ಯಾನಾಗುಂದಿ ಬೆಟ್ಟದ ಮಾತೆ ಮಾಣಿಕೇಶ್ವರಿ ದೇವಸ್ಥಾನದಲ್ಲಿ 101 ಶಿವಲಿಂಗಗಳ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿಗೆ ಸದಾ ನಾನು ಬದ್ಧ. ಈ ಪೂಜಾ ಕಾರ್ಯಗಳಿಂದ ನಾನು ಮತ್ತು ನಮ್ಮ ಕುಟುಂಬ ವರ್ಗ ಮಾತ್ರವಲ್ಲದೇ ನಮ್ಮ ಎಲ್ಲಾ ಕಾರ್ಯಕರ್ತರು ಪುನೀತರಾಗಿದ್ದೇವೆ. ಮತಕ್ಷೇತ್ರದ ಜನತೆಯ ಸಮಗ್ರ ಅಭಿವೃದ್ಧಿಯಾಗಲಿ, ಸಮೃದ್ಧಿಯಾಗಲಿ ಎಂದು ಈ ಸಂದರ್ಭದಲ್ಲಿ ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಅವರು ತಿಳಿಸಿದರು.