ಯಾದಗಿರಿ: ನಗರದ ರಂಗಮಂದಿರ, ಕನ್ನಡ ಭವನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಜಿಲ್ಲಾ ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯ ಆರ್. ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದಾರೆ.
ಮೊದಲಿಗೆ ರಂಗಮಂದಿರಕ್ಕೆ ಭೇಟಿ ನೀಡಿದ ಅವರು, ರಂಗಮಂದಿರ ಹಾಗೂ ಕನ್ನಡ ಭವನ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಗುಣಮಟ್ಟದ ಸಾಮಗ್ರಿಗಳನ್ನು ಬಳಕೆ ಮಾಡಬೇಕು. ನೀಲನಕ್ಷೆಯಂತೆಯೇ ಕಟ್ಟಡ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಎರಡೂ ಭವನಗಳ ಸುತ್ತಮುತ್ತ ಸ್ಪಚ್ಛತಾ ಕಾರ್ಯ ಕೈಗೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ನಂತರ ಜಿಲ್ಲಾ ಕ್ರೀಡಾಗಂಣಕ್ಕೆ ಭೇಟಿ ನೀಡಿ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಕಚೇರಿ ಕಟ್ಟಡದಲ್ಲಿ ಗೋಡೆಗಳು ಸಣ್ಣ ಸಣ್ಣ ಬಿರುಕುಗಳನ್ನು ಬಿಟ್ಟಿವೆ. ಕೂಡಲೇ ಅದನ್ನು ದುರಸ್ತಿಪಡಿಸಿಬೇಕು. ಕ್ರೀಡಾಗಂಣಕ್ಕೆ ದಿನನಿತ್ಯ ಕ್ರೀಡಾಪಟುಗಳು ಹಾಗೂ ವಾಯು ವಿಹಾರಕ್ಕೆಂದು ಬರುವ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸದಾಗಿ ನಿರ್ಮಾಣವಾದ ಕೋಣೆಗಳನ್ನು ವೀಕ್ಷಿಸಿ ಕಾಲೇಜಿನ ಆವರಣವನ್ನು ಸ್ಪಚ್ಛವಾಗಿಟ್ಟುಕೊಳ್ಳಬೇಕು. ಸ್ಪಚ್ಛ ಪರಿಸರ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮೂಡಿಸುವ ಕಾರಣ ಅವರ ಕಲಿಕೆ ಉತ್ತಮಗೊಳ್ಳುತ್ತದೆ ಎಂದರು.