ಕರ್ನಾಟಕ

karnataka

ETV Bharat / state

ಭೀಮಾನದಿ ತೀರದ ಕಂಗಳೇಶ್ವರ ,ವೀರಾಂಜನೇಯ ದೇವಾಲಯ ಜಲಾವೃತ: ನದಿಗಿಳಿಯದಂತೆ ಎಸ್ಪಿ ಸೂಚನೆ - Kangaleshwar and Veeranjaneya temples drowned due to flood in Bhima river

ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದ್ದು, ಹೆಚ್ಚಿನ ನೀರನ್ನು ನದಿಗಳಿಗೆ ಬಿಡಲಾಗಿದೆ. ಇದರಿಂದಾಗಿ ಭೀಮಾನದಿ ತೀರದಲ್ಲಿರುವ ದೇವಾಲಯ ಜಲಾವೃತವಾಗಿದೆ.

increase-in-inflow-of-water-in-yadagiris-narayanpur-basavasagar-reservoir
ಭೀಮಾನದಿ ತೀರದ ಕಂಗಳೇಶ್ವರ ,ವೀರಾಂಜನೇಯ ದೇವಾಲಯ ಜಲಾವೃತ: ನದಿಗಿಳಿಯದಂತೆ ಎಸ್ಪಿ ಸೂಚನೆ

By

Published : Jul 21, 2022, 4:01 PM IST

ಯಾದಗಿರಿ : ಮಹಾರಾಷ್ಟ್ರ ಸೇರಿ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದ್ದು, ಈ ಹಿನ್ನೆಲೆಯಲ್ಲಿ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆಯಾಗುತ್ತಿದೆ. ಹಾಗಾಗಿ ಭೀಮಾ ನದಿಗೆ ಹೆಚ್ಚಿನ ನೀರು ಹರಿದುಬಂದಿದ್ದು, ಭೀಮಾನದಿ ತೀರದ ಕಂಗಳೇಶ್ವರ, ವೀರಾಂಜನೇಯ ದೇವಾಲಯ ಜಲಾವೃತವಾಗಿದೆ. ಇಲ್ಲಿನ ವೀರಾಂಜನೇಯ ದೇವರ ದರ್ಶನಕ್ಕೆ ಬರುವ ಭಕ್ತರು ಭೀಮಾ ನದಿ ದಡದಲ್ಲೇ ದೇವರಿಗೆ ಕೈ ಮುಗಿದು ಹಿಂತಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಭೀಮಾನದಿ ತೀರದ ಕಂಗಳೇಶ್ವರ ,ವೀರಾಂಜನೇಯ ದೇವಾಲಯ ಜಲಾವೃತ: ನದಿಗಿಳಿಯದಂತೆ ಎಸ್ಪಿ ಸೂಚನೆ

ಇಲ್ಲಿನ ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ಭೀಮಾನದಿಗೆ ಸುಮಾರು 17 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ಭೀಮಾನದಿಗೆ ನೀರಿನ ಒಳವು ಹೆಚ್ಚಾಗಿದೆ. ಇನ್ನು ಹೆಚ್ಚಿನ ನೀರು ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ನದಿಗೆ ಇಳಿಯದಂತೆ ಸೂಚನೆ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ನಾರಾಯಣಪುರ ಬಸವ ಸಾಗರಕ್ಕೆ ಹೆಚ್ಚಿನ ನೀರು ಹರಿಸಲಾಗುತ್ತಿದ್ದು, ಪರಿಣಾಮ ಜಲಾಶಯ ಈಗಾಗಲೇ ಬಹುತೇಕ ಭರ್ತಿಯಾಗಿದೆ. ಜಲಾಶಯದಿಂದ ಹೆಚ್ಚಿನ ನೀರನ್ನು ಕೃಷ್ಣಾ, ಭೀಮಾ ನದಿಗಳಿಗೆ ಹರಿಬಿಡಲಾಗುತ್ತಿದ್ದು ನದಿಪಾತ್ರದ ಜನರು, ರೈತರು, ಮೀನುಗಾರರು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ಎಸ್ಪಿ ಡಾ. ವೇದಮೂರ್ತಿ ಸೂಚನೆ ನೀಡಿದ್ದಾರೆ.

ಓದಿ :ಮುಂದುವರಿದ ಮಳೆ: ಇಂದಿನ ಜಲಾಶಯಗಳ ನೀರಿನ ಮಟ್ಟ ಹೀಗಿದೆ..

ABOUT THE AUTHOR

...view details