ಕರ್ನಾಟಕ

karnataka

ETV Bharat / state

ಯಾದಗಿರಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ.. ಕ್ರಮ ಕೈಗೊಳ್ಳದೆ ಜಿಲ್ಲಾಡಳಿತದ ಜಾಣ ಕುರುಡು..

ಯಾದಗಿರಿ ಜಿಲ್ಲೆಯ ಸುರಪುರ ಮತ್ತು ಶಹಪುರ ತಾಲೂಕಿನ ಕೃಷ್ಣಾ ನದಿ ದಂಡೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ನದಿ ದಂಡೆಯ ಅಕ್ಕ-ಪಕ್ಕದಲ್ಲಿರುವ ರೈತರ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯದಂತಾಗಿದೆ.

ಯಾದಗಿರಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ

By

Published : Nov 25, 2019, 12:29 PM IST

ಯಾದಗಿರಿ:ಜಿಲ್ಲೆಯ ಸುರಪುರ ಮತ್ತು ಶಹಪುರ ತಾಲೂಕಿನ ಕೃಷ್ಣಾ ನದಿ ದಂಡೆಯಲ್ಲಿ ಯಾವುದೇ ಪರವಾನಿಗೆ ಪಡೆಯದೆ ಟ್ರ್ಯಾಕ್ಟರ್ ಮತ್ತು ಟಿಪ್ಪರ್​​ಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ. ಆದರೆ, ಇದಕ್ಕೆ ಜಿಲ್ಲಾಡಳಿತ ಮಾತ್ರ ಕಡಿವಾಣ ಹಾಕಲು ಮುಂದಾಗುತ್ತಿಲ್ಲ.

ಅಕ್ರಮ ಮರಳು ದಂಧೆಕೋರರು ಬಳಸುವ ವಾಹನಗಳ ಸಂಚಾರದಿಂದ ನದಿ ತೀರದಲ್ಲಿರುವ ರೈತರ ಜಮೀನುಗಳು ಹಾಳಾಗುತ್ತಿವೆ. ಫಲವತ್ತಾದ ಜಮೀನುಗಳು ಯಾವುದೇ ಬೆಳೆ ಬೆಳೆಯದಂತಾಗಿ ಬೀಳು ಬಿದ್ದಿವೆ. ಅನ್ನದಾತ ಸಂಕಷ್ಟ ಅನುಭವಿಸುವಂತಾಗಿದೆ.

ಯಾದಗಿರಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ..

ಸುರಪುರದ ಕರ್ನಲ್, ಯಮನೂರ, ಹೆಮ್ಮಡಗಿ, ಸೂಗುರ ಹಾಗೂ ಶಹಪುರದ ಕೊಳ್ಳುರ ಗ್ರಾಮಗಳು ಸೇರಿದಂತೆ ಹಲವು ಗ್ರಾಮಗಳ ಹೊರವಲಯದ ಕೃಷ್ಣಾ ನದಿ ದಂಡೆಯಲ್ಲಿ ಅಕ್ರಮ ಮರಳುಗಾರಿಕೆ ದಂಧೆ ನಡೆಯುತ್ತಿದೆ. ಅಕ್ರಮ ಮರಳುಗಾರಿಕೆಯಿಂದ ನದಿ ಪಾತ್ರದ ರೈತರು ಕಂಗಾಲಾಗಿದ್ದಾರೆ. ಕೂಡಲೇ ಮರಳುಗಾರಿಕೆ ದಂಧೆಗೆ ಜಿಲ್ಲಾಡಳಿತ ಬ್ರೇಕ್ ಹಾಕುವ ಮೂಲಕ ಜಮೀನುಗಳ ರಕ್ಷಣೆಗೆ ಮುಂದಾಗಬೇಕು ಅಂತಾ ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.

ABOUT THE AUTHOR

...view details