ಕರ್ನಾಟಕ

karnataka

ETV Bharat / state

ಖರ್ಗೆ ಸೋಲಿಸಲೆಂದೆ ಬಿಜೆಪಿ ಪಕ್ಷಕ್ಕೆ ಬಂದೆ:ಬಾಬುರಾವ್​ ಚಿಂಚನಸೂರ - ಖರ್ಗೆ ಸೋಲಿಸಲೆಂದೆ ಬಿಜೆಪಿ ಪಕ್ಷಕ್ಕೆ ಸೇರಿದ್ದೆ .

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲೇಬೇಕೆಂಬ ಉದ್ದೇಶದಿಂದ ಪಕ್ಷಕ್ಕೆ ಬಂದಿರೋದಾಗಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಹೇಳಿದ್ದಾರೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಅವರು ಮಾತನಾಡಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಬಾಬುರಾವ್​ ಚಿಂಚನಸೂರ

By

Published : May 25, 2019, 9:31 PM IST

ಯಾದಗಿರಿ:ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲೆೇಬೇಕೆಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ. ಅದರಂತೆ ಅವರಿಗೆ ಸೋಲಿನ ರುಚಿ ತೋರಿಸಲಾಗಿದೆ ಎಂದು ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್​ ಚಿಂಚನಸೂರ ಹೇಳಿರುವ ವಿಡಿಯೋ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಾಬುರಾವ್​ ಚಿಂಚನಸೂರ ವಿಡಿಯೋ ವೈರಲ್ ಆಗಿದೆ.

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಾಬುರಾವ್​ ಚಿಂಚನಸೂರ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಖರ್ಗೆಯವರನ್ನು ಸೋಲಿಸಬೇಕೆಂದು ಬಿಜೆಪಿ ಪಕ್ಷಕ್ಕೆ ಸೇರಿದ್ದೆ.ಅದರಂತೆ ಶಪಥ ಮಾಡಿ ಸೋಲಿಲ್ಲದ ಸರದಾರನಿಗೆ ಸೋಲುಣಿಸಿದ್ದೇನೆ ‌ಎಂದಿರುವುದು ವಿಡಿಯೋದಲ್ಲಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪುನಃ ಸಿಎಂ ಮಾಡಬೇಕು. ಜೊತೆಗೆ ಕೋಲಿ ಸಮಾಜವನ್ನು ಎಸ್​ಟಿ ಕೆಟಗರಿಗೆ ಸೇರಿಸಬೇಕಾಗಿರುವುದು ಮುಂದಿನ ಕೆಲಸ ಎಂದವರು ಹೇಳಿದ್ದಾರೆ.

ಇದೇ ವೇಳೆ ದೇವೇಗೌಡರ ವಿರುದ್ಧವೂ ಅವರು ಮಾತನಾಡಿದ್ದಾರೆ. ಅಪ್ಪ,ಮಗನ ಆಟಕ್ಕೂ ಈ ಬಾರಿ ಬ್ರೇಕ್​ ಹಾಕಲಾಗಿದ್ದು ಮುಂದಿನ ದಿನಗಳಲ್ಲಿ ಅವರಿಗೆ ರಾಜಕೀಯ ಭವಿಷ್ಯವೇ ಇಲ್ಲದಂತಾಗಿದೆ ಎಂದು ವ್ಯಂಗವಾಡಿದರು. ಅದೇ ರೀತಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕ್​ ಖರ್ಗೆಗೆ ಸೋಲಿನ ರುಚಿ ತೋರಿಸಲಾಗುವುದು ಎಂದು ಕಿಡಿಕಾರಿದರು.

For All Latest Updates

TAGGED:

ABOUT THE AUTHOR

...view details