ಕರ್ನಾಟಕ

karnataka

ETV Bharat / state

ವಿಚ್ಛೇದನ ಕೊಡಲು ನಿರಾಕರಣೆ.. ಯಾದಗಿರಿಯಲ್ಲಿ ಪತ್ನಿ ಕುಟುಂಬಕ್ಕೆ ಬೆಂಕಿ ಹಚ್ಚಿದ ಪತಿ, ಇಬ್ಬರು ಸಾವು - ಪತ್ನಿಯ ತಂದೆ ಸೇರಿದಂತೆ ಮೂವರಿಗೆ ಬೆಂಕಿ ಹಚ್ಚಿದ ಪತಿ

ಮನೆಯಲ್ಲಿ ಕೂಡಿ ಹಾಕಿ ಪೆಟ್ರೋಲ್​ ಎರಚಿ ನಾಲ್ವರನ್ನು ಹತ್ಯೆ ಮಾಡಲು ಮುಂದಾಗಿದ್ದು, ಈ ವೇಳೆ ಇಬ್ಬರು ಸಾವಿಗೀಡಾಗಿದ್ದಾರೆ. ಮತ್ತಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ವಿಚ್ಛೇದನ ಕೊಡಲು ನಿರಾಕರಣೆ.. ಯಾದಗಿರಿಯಲ್ಲಿ ಪತ್ನಿ ಕುಟುಂಬಕ್ಕೆ ಬೆಂಕಿ ಹಚ್ಚಿದ ಪತಿ, ಇಬ್ಬರು ಸಾವು
ವಿಚ್ಛೇದನ ಕೊಡಲು ನಿರಾಕರಣೆ.. ಯಾದಗಿರಿಯಲ್ಲಿ ಪತ್ನಿ ಕುಟುಂಬಕ್ಕೆ ಬೆಂಕಿ ಹಚ್ಚಿದ ಪತಿ, ಇಬ್ಬರು ಸಾವು

By

Published : Jun 29, 2022, 5:10 PM IST

Updated : Jun 29, 2022, 5:50 PM IST

ಯಾದಗಿರಿ: ಇಡೀ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸುವ ಪ್ರಕರಣ ಇಂದು ನಡೆದಿದೆ. ವಿಚ್ಛೇದನ ನೀಡದ ಹಿನ್ನೆಲೆ ಪತ್ನಿಯ ಕುಟುಂಬಕ್ಕೆ ಪೆಟ್ರೋಲ್ ಸುರಿದು ಪತಿ ಬೆಂಕಿ ಹಚ್ಚಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಕೊಡೇಕಲ್ ಸಮೀಪದ ನಾರಾಯಣಪುರ ಗ್ರಾಮದ ಛಾಯಾ ಕಾಲೋನಿಯಲ್ಲಿ ನಡೆದಿದೆ.

ಆರೋಪಿ ಶರಣಪ್ಪನ ಪತ್ನಿ ಹುಲಿಗೆಮ್ಮ ಅವರು ಲಿಂಗಸೂಗೂರಿನ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪದೇ ಪದೇ ಡಿವೋರ್ಸ್​​ಗಾಗಿ ತನ್ನ ಪತಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಹುಲಿಗೆಮ್ಮ ಕಳೆದ14 ತಿಂಗಳನಿಂದ ಗಂಡನೊಂದಿಗೆ ಜಗಳವಾಡಿ ನಾರಾಯಣಪುರದ ಪತಿಯ ನಿವಾಸವನ್ನು ತೊರೆದು ಲಿಂಗಸೂಗೂರಿನ ಮನೆಯಲ್ಲಿ ವಾಸವಿದ್ದರು. ಒಟ್ಟಿಗೆ ಇರದ ಕಾರಣ ಶರಣಪ್ಪ ತನ್ನ ಪತ್ನಿ ಹುಲಿಗೆಮ್ಮಳಿಗೆ ವಿಚ್ಛೇಧನ ನೀಡುವಂತೆ ಪೀಡಿಸುತ್ತಿದ್ದನಂತೆ.

ಇದಕ್ಕೆ ಒಪ್ಪದ ಕಾರಣ ತನ್ನ ಪತ್ನಿಯ ತಂದೆ ಹಾಗೂ ಮೂವರು ಸಂಬಂಧಿಕರಿಗೆ ನ್ಯಾಯ ಪಂಚಾಯಿತಿ ಮಾಡಲು ನಾರಾಯಣಪುರದ ತನ್ನ ನಿವಾಸಕ್ಕೆ ಕರೆಯಿಸಿಕೊಂಡಿದ್ದಾನೆ. ತನ್ನ ಪತ್ನಿಗೆ ವಿಚ್ಛೇದನ ಕೊಡಿಸಲು ನೀವು ಸಹಕರಿಸಿ ಎಂದು ಅವರಿಗೆ ಹೇಳಿದ್ದಾನೆ. ಇದಕ್ಕೆ ಅವರು ಒಪ್ಪದಿದ್ದಾಗ ಮನೆಯ ಹೊರಗಡೆ ಬಾಗಿಲನ್ನು ಲಾಕ್​ ಮಾಡಿ ಕಿಟಕಿಯಲ್ಲಿ ಪೆಟ್ರೋಲ್ ಸುರಿದು ನಂತರ ಸಂಬಂಧಿಕರಿಗೆ ಬೆಂಕಿ ಹಚ್ಚಿ ಕಿಟಕಿಗಳನ್ನು ಹೊರಗಡೆಯಿಂದ ಲಾಕ್​ ಮಾಡಿದ್ದಾನೆ.

ಯಾದಗಿರಿಯಲ್ಲಿ ಪತ್ನಿ ಕುಟುಂಬಕ್ಕೆ ಬೆಂಕಿ ಹಚ್ಚಿದ ಪತಿ, ಇಬ್ಬರು ಸಾವು

ಸ್ವಲ್ಪ ಸಮಯದ ನಂತರ ಮನೆಯಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ಕಂಡು ನೆರೆಯ ಗ್ರಾಮಸ್ಥರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ವಿಪರೀತ ಗಾಯಗೊಂಡಿದ್ದ ಸಿದ್ರಾಮಪ್ಪ ಮುರಾಳ, ಮುತ್ತಪ್ಪ ಮುರಾಳ, ಶರಣಪ್ಪ ಸರೂರ, ನಾಗಪ್ಪ ಅವರನ್ನು ಲಿಂಗಸೂಗೂರಿನ ಸರ್ಕಾರಿ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಆದರೆ ವಿಪರೀತ ಸುಟ್ಟಗಾಯದಿಂದ ನಾಗಪ್ಪ ಹಾಗೂ ಶರಣಪ್ಪ ಸಾವಿಗೀಡಾಗಿದ್ದಾರೆ. ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಈ ಕುರಿತು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶರಣಪ್ಪನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಎಸ್​ ಪಿ ವೇದಮೂರ್ತಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬಳ್ಳಾರಿ ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್​ನಲ್ಲಿ ಬೆಂಕಿ ಅವಘಡ.. 14 ಶಿಶುಗಳ ರಕ್ಷಣೆ

Last Updated : Jun 29, 2022, 5:50 PM IST

For All Latest Updates

TAGGED:

ABOUT THE AUTHOR

...view details