ಯಾದಗಿರಿ:ಅನೈತಿಕ ಸಂಬಂಧ ವಿಚಾರವಾಗಿ ಪತಿಯೇ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಹಾಡಹಗಲೆ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಸಮೀಪದ ಕಾಚಾಪೂರ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಬಸಮ್ಮ (34), ಪ್ರಿಯಕರ ನಾಡಗೌಡ(36) ಮೃತರು. ಗುರುವಾರ ಮಧ್ಯಾಹ್ನ ಹತ್ತಿ ಹೊಲದಲ್ಲಿ ಪತ್ನಿ ಮತ್ತು ಪ್ರಿಯಕರ ಅನೈತಿಕ ಸಂಬಂಧದಲ್ಲಿ ತೊಡಗಿದ್ದಾಗ ಪತಿ ಮಲ್ಲಣ್ಣ ಮಾರಕಾಸ್ತ್ರಗಳಿಂದ ಇರಿದು ಇಬ್ಬರನ್ನೂ ಹತ್ಯೆ ಮಾಡಿದ್ದಾನೆ. ಆರೋಪಿ ಪತಿ ಮಲ್ಲಣ್ಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.