ಕರ್ನಾಟಕ

karnataka

ETV Bharat / state

ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಯಾದಗಿರಿಯಲ್ಲಿ ಬೃಹತ್​​ ಕ್ಯಾಂಡಲ್​​ ಮಾರ್ಚ್​ - ಮಹಿಳೆಯರ‌ ಮೇಲಿನ ದೌರ್ಜನ್ಯ ತಡೆಗಟ್ಟುವಂತೆ ಒತ್ತಾಯ

ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಯಾದಗಿರಿಯಲ್ಲಿಂದು ಬೃಹತ್ ಕ್ಯಾಂಡಲ್ ಮಾರ್ಚ್ ನಡೆಸಲಾಯಿತು.

huge-candle-march-in-yadgir-condemns-rape-and-murder-case
ಪಶು ವೈದ್ಯೆ ಅತ್ಯಾಚಾರ,ಕೊಲೆ ಪ್ರಕರಣ ಖಂಡಿಸಿ ಯಾದಗಿರಿಯಲ್ಲಿ ಬೃಹತ್ ಕ್ಯಾಂಡಲ್ ಮಾರ್ಚ್

By

Published : Dec 2, 2019, 9:55 PM IST

ಯಾದಗಿರಿ:ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಯಾದಗಿರಿಯಲ್ಲಿಂದು ಬೃಹತ್ ಕ್ಯಾಂಡಲ್ ಮಾರ್ಚ್ ನಡೆಸಲಾಯಿತು. ಗುರುಮಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಶ್ರೀಗಳ ನೇತ್ರತ್ವದಲ್ಲಿ ನಗರದ ಲಕ್ಷ್ಮೀ ದೇವಸ್ಥಾನದಿಂದ ಸುಭಾಷ್ ಸರ್ಕಲ್​​ವರೆಗೆ ಮೆರವಣಿಗೆ ನಡೆಸಲಾಯಿತು.

ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಯಾದಗಿರಿಯಲ್ಲಿ ಬೃಹತ್ ಕ್ಯಾಂಡಲ್ ಮಾರ್ಚ್

ಪಕ್ಷಾತೀತವಾಗಿ ರಾಜಕೀಯ ಮುಖಂಡರು, ಶಾಲಾ ವಿಧ್ಯಾರ್ಥಿಗಳು ಹಾಗೂ ಸ್ಥಳೀಯರು ಸ್ವಯಂ ಪ್ರೇರಿತವಾಗಿ ಕ್ಯಾಂಡಲ್ ಮಾರ್ಚ್​ನಲ್ಲಿ ಪಾಲ್ಗೊಂಡಿದ್ದರು. ಶಾಲಾ ಮಕ್ಕಳು ಸ್ಟಾಪ್ ರೇಪ್ ಬೋರ್ಡ್ ಹಿಡಿದು ಮೆರವಣಿಗೆಯಲ್ಲಿ ಭಾಗಿಯಾಗಿ ವೈದ್ಯೆಯ ಹತ್ಯೆಯನ್ನು ಬಲವಾಗಿ ಖಂಡಿಸಿದರು.

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಿ, ಸರ್ಕಾರ ಮಹಿಳೆಯರಿಗೆ ಸೂಕ್ತ ರಕ್ಷಣೆ ಕಲ್ಪಿಸುವ ಮೂಲಕ ಮಹಿಳೆಯರ‌ ಮೇಲಿನ ದೌರ್ಜನ್ಯ ತಡೆಗಟ್ಟಬೇಕಾಗಿದೆ ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದ್ರು.

For All Latest Updates

ABOUT THE AUTHOR

...view details