ಕರ್ನಾಟಕ

karnataka

ETV Bharat / state

ಮಳೆಗೆ ಮನೆ ಕುಸಿತ: ಬಾಣಂತಿ, ಮಗು ಸಹಿತ ಬೀದಿಗೆ ಬಿದ್ದ ಕುಟುಂಬ! - ಯಾದಗಿರಿ ಸುದ್ದಿ

ಮನೆ ಕುಸಿದ ಹಿನ್ನೆಲೆ ಕಳೆದ 9 ದಿನಗಳಿಂದ ಬಾಣಂತಿ, ಮಗು ಸೇರಿ ಕುಟುಂಬದ 7 ಜನ ಮನೆ ಬಿದ್ದ ಜಾಗದ ಪ್ರದೇಶದ ಮುಂಭಾಗದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

house copllapse
house copllapse

By

Published : Aug 1, 2020, 9:34 AM IST

ಯಾದಗಿರಿ:ಮಳೆ ಅವಾಂತರದಿಂದ ಮನೆ ಕುಸಿದ ಹಿನ್ನೆಲೆ ಕುಟುಂಬವೊಂದು ಬೀದಿಯಲ್ಲಿ ಬದುಕು ಸಾಗಿಸುತ್ತಿದೆ. ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ಗಾಳೆಪ್ಪ ಎಂಬುವವರ ಮನೆ 9 ದಿನದ ಹಿಂದೆ ಭಾರಿ ಮಳೆ ಸುರಿದ ಹಿನ್ನೆಲೆ ಮನೆ ಕುಸಿದಿತ್ತು.

ಮನೆಯಲ್ಲಿರುವ ವಸ್ತುಗಳಿಗೂ ಕೂಡ ಹಾನಿಯಾಗಿದೆ. ಪರಿಣಾಮ ಕಳೆದ 9 ದಿನಗಳಿಂದ ಬಾಣಂತಿ, ಮಗು ಸೇರಿ 7 ಜನ ಮನೆ ಬಿದ್ದ ಜಾಗದ ಪ್ರದೇಶದ ಮುಂಭಾಗದಲ್ಲಿ ಆಶ್ರಯ ಕಲ್ಪಿಸಿಕೊಂಡಿದ್ದಾರೆ.

ಬೀದಿಗೆ ಬಿದ್ದ ಕುಟುಂಬ

ಮನೆ ಬಿದ್ದ ಜಾಗದ ಪ್ರದೇಶವೇ ಈಗ ಇವರಿಗೆ ಆಶ್ರಯ ತಾಣವಾಗಿದೆ. ಬಿದಿ ಬದಿಯಲ್ಲಿ ಅಡುಗೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಮಳೆ ಬಂದರೆ ವಾಸ ಮಾಡಲು ಪರದಾಡುವಂತಾಗಿದೆ.

ಸರಕಾರ ತಾತ್ಕಾಲಿಕವಾಗಿ ಮನೆ ದುರಸ್ತಿ ಮಾಡಿಸಿ ಅನುಕೂಲ ಮಾಡಬೇಕಿತ್ತು. ಆದರೆ, ಅಗತ್ಯ ಪಡಿತರ ಧಾನ್ಯ ನೀಡಿ ಕೈತೊಳೆದುಕೊಂಡಿದೆ. ಸರಕಾರ ಇಲ್ಲವೇ ಸಂಘ ಸಂಸ್ಥೆಯವರು ಸಹಾಯ ಮಾಡಿ ಈ ಕುಟುಂಬಕ್ಕೆ ನೆರವಾಗಬೇಕಿದೆ.

ABOUT THE AUTHOR

...view details