ಕರ್ನಾಟಕ

karnataka

ETV Bharat / state

ಯಾದಗಿರಿಯಲ್ಲಿ 58 ಜನರಿಗೆ ಹೋಮ್ ಕ್ವಾರಂಟೈನ್​: ಡಿಸಿ - ಡಿಸಿ ಕುರ್ಮಾರಾವ್

ಯಾದಗಿರಿಯಲ್ಲಿ ಇಲ್ಲಿಯವರೆಗೆ ಕರೊನಾ ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಇಬ್ಬರ ಸ್ಯಾಂಪಲ್ ತೆಗೆದು ಲ್ಯಾಬಿಗೆ ಕಳಿಸಿದ್ದು, ಅದರಲ್ಲಿ ಒಬ್ಬರ ವರದಿ ನೆಗೆಟಿವ್ ಬಂದಿದೆ. ಇನ್ನೊಬ್ಬರ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ಕುರ್ಮಾರಾವ್ ಹೇಳಿದರು.

ಡಿಸಿ ಕುರ್ಮಾರಾವ್
ಡಿಸಿ ಕುರ್ಮಾರಾವ್

By

Published : Mar 24, 2020, 11:20 PM IST

ಯಾದಗಿರಿ: ಕರೊನಾ ವೈಸರ್ ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಎಲ್ಲರೂ ಇದನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ಸೆಕ್ಷನ್ 144 ಜಾರಿಯಲ್ಲಿದ್ದು, ಜನರು ಅನಗತ್ಯವಾಗಿ ಹೊರಗಡೆ ಬರದೆ ಸರ್ಕಾರದ ಆದೇಶವನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಯಾದಗಿರಿ ಜಿಲ್ಲಾಧಿಕಾರಿ ಕುರ್ಮಾರಾವ್ ಎಂ. ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕರೊನಾ ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಇಬ್ಬರ ಸ್ಯಾಂಪಲ್ ತೆಗೆದು ಲ್ಯಾಬಿಗೆ ಕಳಿಸಿದ್ದು, ಅದರಲ್ಲಿ ಒಬ್ಬರ ವರದಿ ನೆಗೆಟಿವ್ ಬಂದಿದೆ. ಇನ್ನೊಬ್ಬರ ವರದಿ ಬರಬೇಕಾಗಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕುರ್ಮಾರಾವ್

ದುಬೈ, ಸೌದಿ ಸೇರಿದಂತೆ ವಿದೇಶದಿಂದ ಜಿಲ್ಲೆಗೆ ವಾಪಸ್ ಆದ ಒಟ್ಟು 58 ಜನರನ್ನು ಹೋಮ್ ಕ್ವಾರಂಟೈನಲ್ಲಿ ಇರಿಸುವ ಮೂಲಕ ತೀವ್ರ ನಿಗಾ ವಹಿಸಲಾಗಿದೆ. ಮಧ್ಯರಾತ್ರಿಯಿಂದಲೇ ಯಾದಗಿರಿ ಜಿಲ್ಲೆ ಲಾಕ್​​ಡೌನ್ ಹಿನ್ನೆಲೆ 144 ಸೆಕ್ಷನ್​​ ಜಾರಿಗೊಳಿಸಿದ್ದು, ಯಾರೂ ಕೂಡ ಮನೆಯಿಂದ ಹೊರ ಬರಬಾರದೆಂದು ಸೂಚನೆ ನೀಡಿದರು.

ABOUT THE AUTHOR

...view details