ಕರ್ನಾಟಕ

karnataka

ETV Bharat / state

ಅಕಾಲಿಕ ಮಳೆಗೆ ಸೂರು ಕಳೆದುಕೊಂಡ ಸುರಪುರದ ಮಹಿಳೆ: ಆಹಾರ ಧಾನ್ಯಗಳು ನೀರುಪಾಲು - premature rain in Surapur

ಸಾಲ ಮಾಡಿ ತಗಡಿನ ಮನೆ ಮಾಡಿಕೊಂಡಿದ್ದು, ಇದ್ದ ಮನೆಯೂ ಮಳೆಯಿಂದ ಹಾಳಾಗಿದೆ. ಜೊತೆಗೆ ಸರ್ಕಾರ ಕೊಟ್ಟಿರುವ ಆಹಾರ ಸಾಮಾಗ್ರಿಗಳೂ ಕೂಡ ನೀರು ತಗುಲಿ ಹಾನಿಗೊಳಗಾಗಿವೆ ಎಂದು ಸಂತ್ರಸ್ತ ಮಹಿಳೆ ಸಮಸ್ಯೆ ಹೇಳಿಕೊಂಡರು.

Home damage from premature rain in Surapur
ಅಕಾಲಿಕ ಮಳೆಗೆ ಹಂಚಿನ ಮನೆ ಜಕಂ

By

Published : May 3, 2020, 11:53 AM IST

ಸುರಪುರ: ಸಂಜೆ ವೇಳೆಗೆ ಸುರಿದ ಅಕಾಲಿಕ ಮಳೆಗೆ ಹಂಚಿನ ಮನೆ ಹಾನಿಗೊಳಗಾಗಿದ್ದು, ಸಾವಿರಾರು ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು, ಆಹಾರ ಧಾನ್ಯಗಳು ನೀರು ಪಾಲಾಗಿವೆ.

ವಾರ್ಡ್ ನಂ.16 ದಾಸರಗಲ್ಲಿಯ ಮಹಾದೇವಿ ಚಂದ್ರಶೇಖರ್ ಎಂಬುವವರಿಗೆ ಸೇರಿದ ತಗಡಿನ ಮನೆಯನ್ನು ಮಳೆ ಧ್ವಂಸಗೊಳಿಸಿದೆ.

ಅಕಾಲಿಕ ಮಳೆಗೆ ಮನೆಗೆ ಹಾನಿ

ಸಾಲ ಮಾಡಿ ತಗಡಿನ ಮನೆ ಮಾಡಿಕೊಂಡಿದ್ದ ಮಹಾದೇವಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಈಗ ಇದ್ದ ಮನೆಯೂ ಹಾಳಾಗಿದ್ದು, ಟಿ.ವಿ, ಸೇರಿದಂತೆ ಸಾಮಾಗ್ರಿಗಳೆಲ್ಲಾ ಹಾನಿಯಾಗಿ ಅಸಹಾಯಕತೆ ವ್ಯಕ್ತಪಡಿಸಿದರು.

ಮನೆ ಬಿದ್ದ ಸ್ಥಳಕ್ಕೆ ತಾಲೂಕು ದಂಡಾಧಿಕಾರಿ ನಿಂಗಣ್ಣ ಬಿರಾದಾರ್, ಕಂದಾಯ ನಿರೀಕ್ಷಕ ಗುರುಬಸಪ್ಪ, ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್ ನಾಲ್ವಡೆ, ಸಂತೋಷ ರಾಠೋಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details