ಯಾದಗಿರಿ: ವಡಗೇರಾ ಪಟ್ಟಣದ ಆಂಜನೇಯ ದೇವಾಲಯದ ಆವರಣದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಬೇವು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪಟ್ಟಣದ ಎಲ್ಲಾ ಧರ್ಮದ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಪೂಜೆ ಸಲ್ಲಿಸುವ ಮೂಲಕ ಸೌಹಾರ್ದತೆ ಮೆರೆದರು.
ಈ ವೇಳೆ ಮಾತನಾಡಿದ ಅಲ್ಪಸಂಖ್ಯಾತರ ಹಿರಿಯ ಮುಖಂಡ ಬಾಷುಮಿಯಾ ವಡಗೇರಾ, ನಮ್ಮ ಭಾಗದಲ್ಲಿ ಧರ್ಮಗಳ ನಡುವೆ ಯಾವುದೇ ವಿವಾದವಿಲ್ಲ. ನಾವು ತುಂಬಾ ಆತ್ಮೀಯರಾಗಿದ್ದೇವೆ. ಸಂವಿಧಾನಕ್ಕೆ ಗೌರವ ಕೊಟ್ಟು ಅದರಡಿ ಬಾಳಿ ಬದುಕಬೇಕು ಎಂದರು.