ಯಾದಗಿರಿ:ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಸೇತುವೆ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕೊಟಗೇರಾ ಗ್ರಾಮದ ಬಳಿ ಇರುವ ಸೇತುವೆ ಜಲಾವೃತಗೊಂಡಿದ್ದು, ಯಾದಗಿರಿಯಿಂದ ಕೊಟಗೇರಾ, ಹೊಸಹಳ್ಳಿ, ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿಗೆ ಹೋಗುವ ವಾಹನ ಸವಾರರು ಪರದಾಡುವಂತಾಗಿದೆ.
ಯಾದಗಿರಿಯಲ್ಲಿ ಧಾರಾಕಾರ ಮಳೆ: ಸೇತುವೆ ಜಲಾವೃತ - ಯಾದಗಿರಿ ಸುದ್ದಿ
ಕೊಟಗೇರಾ ಗ್ರಾಮದ ಬಳಿ ಇರುವ ಸೇತುವೆ ಜಲಾವೃತಗೊಂಡಿದ್ದು, ಯಾದಗಿರಿಯಿಂದ ಕೊಟಗೇರಾ, ಹೊಸಹಳ್ಳಿ, ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿಗೆ ಹೋಗುವ ವಾಹನ ಸವಾರರು ಪರದಾಡುವಂತಾಗಿದೆ.
ಮಳೆಗೆ ಸೇತುವೆ ಜಲಾವೃತ
ಕಳೆದ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೊಟಗೇರಾ ಗ್ರಾಮದ ಬಳಿಯ ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳದ ನೀರು ಸೇತುವೆ ಮೇಲಿಂದ ಹರಿದು ಹೋಗುತ್ತಿರುವುದರಿಂದ ವಾಹನ ಸವಾರರು ಭಯದಲ್ಲೇ ದಾಟುತ್ತಿದ್ದಾರೆ.
ಆದರೆ ಜನರು ಇಷ್ಟೆಲ್ಲಾ ಸಂಕಷ್ಟ ಅನುಭವಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಭೇಟಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.