ಕರ್ನಾಟಕ

karnataka

ETV Bharat / state

ಯಾದಗಿರಿ ಜಿಲ್ಲೆಯಲ್ಲಿ ಭಾರಿ ಮಳೆ; ಹಳ್ಳದಾಚೆ ಸಿಲುಕಿಕೊಂಡ ರೈತರು! - Heavy rainfall across Yadagiri district

ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಯಾದಗಿರಿ ಜಿಲ್ಲೆಯ ಜನರು ತತ್ತರಿಸಿದ್ದಾರೆ. ಹೊಲ - ಗದ್ದೆಗಳಿಗೆ ತೆರಳಿದ ರೈತರು ತಮ್ಮ ಗ್ರಾಮಕ್ಕೆ ವಾಪಸ್ ಆಗದೇ ಹಳ್ಳದ ಆಚೆಯಲ್ಲೇ ಸಿಲುಕಿಕೊಂಡ ದೃಶ್ಯ ಕಂಡು ಬಂದಿತು.

Heavy rainfall across Yadagiri district
ತುಂಬಿ ಹರಿಯುತ್ತಿರುವ ಯಡ್ಡಹಳ್ಳಿ - ಓರುಂಚಾ ಸೇತುವೆ

By

Published : Sep 26, 2020, 5:50 PM IST

ಯಾದಗಿರಿ : ಕಳೆದ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗೆ ಎಂದು ಜಾನುವಾರುಗಳೊಂದಿಗೆ ಹೊಲ-ಗದ್ದೆಗಳಿಗೆ ತೆಳಿದ ಇಲ್ಲಿನ ರೈತರು ತಮ್ಮ ಗ್ರಾಮಕ್ಕೆ ವಾಪಸ್ ಆಗದೇ ಹಳ್ಳದ ಆಚೆಯಲ್ಲೇ ಸಿಲುಕಿಕೊಂಡಿದ್ದಾರೆ.

ಯಾದಗಿರಿ ತಾಲೂಕಿನ ಯಡ್ಡಹಳ್ಳಿ ಗ್ರಾಮದ ಸೇತುವೆ ಬಳಿ ಈ ಘಟನೆ ನಡೆದಿದೆ. ಕಳೆದ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗ್ರಾಮದ ಪಕ್ಕದಲ್ಲಿರುವ ಹತ್ತಿಕುಣಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತಿದೆ. ಹೀಗಾಗಿ ಯಡ್ಡಹಳ್ಳಿ - ಓರುಂಚಾ ಸೇತುವೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.‌

ತುಂಬಿ ಹರಿಯುತ್ತಿರುವ ಯಡ್ಡಹಳ್ಳಿ - ಓರುಂಚಾ ಸೇತುವೆ

ಏಕಾಏಕಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ಬೆಳಗೆ ಕೃಷಿ ಚಟುವಟಿಕೆಗಳಿಗಾಗಿ ಜಮೀನುಗಳಿಗೆ ತೆರಳಿದ್ದ ರೈತರು, ತಮ್ಮ ಗ್ರಾಮಕ್ಕೆ ವಾಪಸ್​ ಬರಲು ಸಾಧ್ಯವಾಗುತ್ತಿಲ್ಲ. ಇನ್ನು ವರುಣನ ಆರ್ಭಟದಿಂದ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದೆ.

ABOUT THE AUTHOR

...view details