ಕರ್ನಾಟಕ

karnataka

ETV Bharat / state

ಯಾದಗಿರಿಯಲ್ಲಿ ಮಳೆಗೆ ಇಡೀ ಊರೇ ಜಲಾವೃತ: ಸಂಕಷ್ಟಕ್ಕೆ ಸಿಲುಕಿದ ವಿಶೇಷಚೇತನ! - yadagiri rain news 2020

ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಟೊಣ್ಣರು ಗ್ರಾಮದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವುದರ ಪರಿಣಾಮ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ವಿಶೇಷ ಚೇತನರೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Heavy rain in yadagiri
ಸಂಕಷ್ಟಕ್ಕೆ ಸಿಲುಕಿದ ವಿಶೇಷಚೇತನ

By

Published : Sep 26, 2020, 1:16 PM IST

ಯಾದಗಿರಿ: ಕಳೆದ ರಾತ್ರಿಯಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಇಲ್ಲಿನ ಜನ ಅಕ್ಷರಶಃ ನಲುಗಿ ಹೋಗಿದ್ದಾರೆ. ಮನೆಗೆ ನುಗ್ಗಿದ ನೀರಿನಿಂದಾಗಿ ವಿಶೇಷಚೇತನರೊಬ್ಬರು ತೊಂದರೆಗೆ ಸಿಲುಕಿದ್ದಾರೆ.

ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ ವಿಶೇಷಚೇತನ

ಜಿಲ್ಲೆಯ ಶಹಪುರ ತಾಲೂಕಿನ ಟೊಣ್ಣುರು ಗ್ರಾಮದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವುದರ ಪರಿಣಾಮ ಮನೆಗಳಿಗೆ ಮಳೆ ನೀರು ನುಗ್ಗಿ ಇಡೀ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಅಲ್ಲದೆ ಗ್ರಾಮದ ವಿಶೇಷಚೇತನ ಶೇಖಪ್ಪ ಎಂಬಾತ ತನ್ನ ಮನೆಗೆ ನುಗ್ಗಿದ ನೀರಿನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಮನೆಯಿಂದ ಹೊರ ಹೋಗುವ ಯೋಚನೆ ಮಾಡಿದರೆ, ಇಡೀ ಊರಿಗೆ ಊರೇ ನೀರಿನಿಂದ ಜಲಾವೃತವಾಗಿರುವುದರಿಂದ ದಿಕ್ಕು ತೋಚದೆ ಸಹಾಯಕ್ಕಾಗಿ ಅಂಗಲಾಚಿದ್ದಾರೆ.

ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸುವ ಮೂಲಕ ಮನೆಗಳಿಗೆ ನುಗ್ಗಿದ ನೀರನ್ನು ಹೊರ ತೆಗೆಸಿ ಗ್ರಾಮಸ್ಥರ ನೆರವಿಗೆ ನಿಲ್ಲಬೇಕು ಎಂದು ಶೇಖಪ್ಪ ಮನವಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details