ಯಾದಗಿರಿ :ಬಿಸಿಲನಾಡು ಯಾದಗಿರಿ ಜಿಲ್ಲೆಯಾದ್ಯಂತ ನಿನ್ನೆ ಸಾಯಂಕಾಲದಿಂದ ಬಿರುಗಾಳಿ ಸಹಿತ ಧಾರಾಕಾರ ಸುರಿದಿತ್ತು. ಆಲೆಕಲ್ಲು ಮಳೆಯಿಂದ ವರುಣದೇವ ಒಂದೆಡೆ ತಂಪೆರೆದ್ರೆ, ಮತ್ತೊಂದೆಡೆ ರೈತರನ್ನ ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದ್ದಾನೆ.
ನಿನ್ನೆ ಸುರಿದ ಬಿರುಗಾಳಿ ಸಹಿತ ಮಳೆಗೆ ಬತ್ತದ ಬೆಳೆ ಹಾನಿ.. - ಯಾದಗಿರಿ ಮಳೆ ನ್ಯೂಸ್
ಬೇಸಿಗೆ ಬಿಸಿಲಿನಿಂದ ತತ್ತರಿಸಿದ್ದ ಜಿಲ್ಲೆಯ ಜನತೆಗೆ ಇಂದು ಮೇಘರಾಜ ತಂಪೆರೆದ್ರೆ, ಮತ್ತೊಂದೆಡೆ ಸಾವಿರಾರು ಎಕರೆಯಲ್ಲಿ ರೈತರು ಬೆಳೆದ ಬತ್ತದ ಬೆಳೆ ಧರೆಗುರಳಿಸುವ ಮೂಲಕ ಅನ್ನದಾತನ ಪಾಡು ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ.
ಯಾದಗಿರಿ ಜಿಲ್ಲಾದ್ಯಂತ ಸುರಿದ ಬಿರುಗಾಳಿ ಸಹಿತ ಮಳೆಗೆ ಬತ್ತದ ಬೆಳೆ ಹಾನಿ
ಬೇಸಿಗೆ ಬಿಸಿಲಿನಿಂದ ತತ್ತರಿಸಿದ್ದ ಜಿಲ್ಲೆಯ ಜನತೆಗೆ ಇಂದು ಮೇಘರಾಜ ತಂಪೆರೆದ್ರೆ, ಮತ್ತೊಂದೆಡೆ ಸಾವಿರಾರು ಎಕರೆಯಲ್ಲಿ ರೈತರು ಬೆಳೆದ ಬತ್ತದ ಬೆಳೆ ಧರೆಗುರಳಿಸುವ ಮೂಲಕ ಅನ್ನದಾತನ ಪಾಡು ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ. ವಡಗೇರಾ ತಾಲೂಕಿನ ಹಲವು ಗ್ರಾಮಗಳಲ್ಲಿ ಬೆಳೆ ಹಾನಿಯಾಗಿ ರೈತರು ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ.