ಸುರಪುರ(ಯಾದಗಿರಿ):ಬಿರುಗಾಳಿ ಮಳೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಮನೆಗಳ ಮೇಲ್ಛಾವಣಿ ಹಾರಿ ಹೋಗಿದ್ದು, ಅಪಾರ ನಷ್ಟ ಉಂಟಾಗಿದೆ.
ಸುರಪುರ: ಬಿರುಗಾಳಿ ಮಳೆಗೆ ಹಾರಿ ಹೋದ ಮನೆ ಮೇಲ್ಛಾವಣಿ - ಯಾದಗಿರಿ ಮಳೆ ಸುದ್ದಿ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಸುರಿದ ಬಿರುಗಾಳಿ ಮಳೆಗೆ ಗುಡಿಸಲುಗಳು ನೆಲಸಮವಾಗಿದ್ದು, ಅನೇಕ ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ.
ಸುರಪುರ: ಬಿರುಗಾಳಿ-ಮಳೆಗೆ ಹಾರಿದ ಹೋದ ಮನೆಗಳ ಮೇಲ್ಛಾವಣಿ
ಭೈರಿಮರಡಿ ಗ್ರಾಮದಲ್ಲಿ ಸುರಿದ ಬಿರುಗಾಳಿ ಮಳೆಗೆ ಅನೇಕ ಗುಡಿಸಲುಗಳು ನೆಲಸಮವಾಗಿದ್ದು, ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ಇನ್ನು, ಗ್ರಾಮದ ಬಲಭೀಮ ನಾಯಕ್ ಎಂಬುವವರ ಜಮೀನಿನಲ್ಲಿ ಹಾಕಲಾಗಿದ್ದ ಪಾಲಿಹೌಸ್ ಕೂಡ ಸಂಪೂರ್ಣ ನೆಲಸಮವಾಗಿದೆ. ತೋಟದಲ್ಲಿ ಬೆಳೆಯಲಾದ ಲಿಂಬೆ, ಬೇವು ಮತ್ತಿತರ ಮರಗಳು ನೆಲಕ್ಕುರಳಿವೆ.