ಸುರಪುರ:ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಹುಣಸಗಿ ತಾಲೂಕಿನ ಇಸ್ಲಾಂಪುರ್ ಕೋಳಿಹಾಳ ರಾಜನಕೋಳೂರು, ಹೆಬ್ಬಾಳ ಸೇರಿದಂತೆ ಅನೇಕ ಕಡೆ ಭತ್ತದ ಬೆಳೆ ನೆಕಚ್ಚಿವೆ.
ನಿನ್ನೆ ಗುಡುಗು ಸಹಿತ ಭಾರಿ ಗಾಳಿ ಬೀಸಿ ಮಳೆ ಸುರಿದಿದ್ದರಿಂದ ಕಾಳು ಕಟ್ಟುವ ಹಂತದಲ್ಲಿದ್ದ ಭತ್ತ ಸಂಪೂರ್ಣ ನೆಲಕ್ಕೆ ಬಿದ್ದಿದೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಬೆಳೆ ನಷ್ಟದ ಕುರಿತು ಇಸ್ಲಾಂಪುರ್ ಗ್ರಾಮದ ರೈತ ಮಲ್ಲಿಕಾರ್ಜುನ ದೊಡ್ಡಮನಿ ಮಾತನಾಡಿ, ಮಳೆಯಿಂದ ಸಂಪೂರ್ಣ ಭತ್ತ ನಾಶವಾಗಿದೆ. ಸರ್ಕಾರವು ರೈತರಿಗೆ ಸಹಾಯ ಮಾಡುವುದಾಗಿ ಹೇಳುತ್ತಿದೆ. ಆದ್ರೆ, ಇದು ಕೇವಲ ಹೇಳಿಕೆಯಾಗಿಯೇ ಉಳಿಯುತ್ತಿದೆ.. ಆದರೆ, ಇದುವರೆಗೂ ಯಾವ ಅಧಿಕಾರಿಗಳು ಕೂಡ ನಮ್ಮ ಜಮೀನಿಗೆ ಭೇಟಿ ನೀಡಿಲ್ಲ ಎಂದರು.
ಮಳೆಯಿಂದ ನೆಲ ಕಚ್ಚಿದ ಭತ್ತದ ಬೆಳೆ : ರೈತರ ಅಳಲು ಸುರಪುರ ಕ್ಷೇತ್ರದ ಶಾಸಕರಾದ ರಾಜುಗೌಡ ಕೂಡ ತಮ್ಮ ಗಮನ ಹರಿಸುತ್ತಿಲ್ಲ. ಶಾಸಕರು ಕೂಡಲೇ ನಮ್ಮ ಜಮೀನಿಗೆ ಆಗಮಿಸಿ ಬೆಳೆ ನಷ್ಟ ವೀಕ್ಷಿಸಿ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ವಿನಂತಿಸಿದ್ದಾರೆ.