ಕರ್ನಾಟಕ

karnataka

ETV Bharat / state

ಮುಂಗಾರು ಮಳೆಯೇ.. ಅವಧಿಪೂರ್ವ ಹತ್ತಿಕುಣಿ ಡ್ಯಾಂ ತುಂಬಿ ರೈತರಲ್ಲಿ ಮಂದಹಾಸ ಮೂಡಿ.. - Hattikuni Dam in Gurmatkal filled

ಹತ್ತಿಕುಣಿ ಡ್ಯಾಂ. ಈ ಭಾಗದ ರೈತರ ಜೀವನಾಡಿ. ಒಟ್ಟು 5,300 ಎಕರೆ ಜಮೀನಿಗೆ ನೀರುಣಿಸುತ್ತೆ. ಜಲಾಶಯದಲ್ಲಿ ಈಗಾಗಲೇ 0.305 ಟಿಎಂಸಿ ನೀರು ಸಂಗ್ರಹವಿದೆ. ಇನ್ನೂ ಹೆಚ್ಚು ನೀರು ಹರಿದು ಬಂದರೆ ಜಲಾಶಯದ ಗೇಟ್‌ಗಳನ್ನು ತೆರೆಯಲು ನೀರಾವರಿ ಎಂಜಿನಿಯರ್ ಸಿದ್ಧಾರೂಡ ತಮ್ಮ ಸಿಬ್ಬಂದಿ ಜತೆ ಸ್ಥಳದಲ್ಲಿದ್ದಾರೆ.

Hattikuni Dam in Gurmatkal filled
ಅವಧಿಪೂರ್ವ ಹತ್ತಿಕುಣಿ ಡ್ಯಾಂ ತುಂಬಿ ರೈತರಲ್ಲಿ ಮಂದಹಾಸ ಮೂಡಿ..

By

Published : Jul 21, 2021, 7:18 PM IST

ಗುರುಮಠಕಲ್ (ಯಾದಗಿರಿ): ರಾಜ್ಯದ ಬಹುತೇಕ ಕಡೆ ಮುಂಗಾರು ಮಳೆ ಬಿಡದೆ ಸುರಿಯುತ್ತಿದೆ. ಹದಭರಿತ ಮಳೆಯಿಂದಾಗಿ ಹಸಿರು ಬೆಟ್ಟಗಳ ಮಧ್ಯೆ ಇರುವ ಹತ್ತಿಕುಣಿ ಜಲಾಶಯ ಇನ್ನೇನು ಭರ್ತಿಯಾಗುತ್ತಿದೆ. ಶೀಘ್ರದಲ್ಲೇ ಅಧಿಕಾರಿಗಳು ನೀರು ಹರಿಬಿಡಲಿದಾರೆ.

ಹತ್ತಿಕುಣಿ ಡ್ಯಾಂ ಭರ್ತಿ

ಹತ್ತಿಕುಣಿ ಡ್ಯಾಂ ಈ ಭಾಗದ ರೈತರ ಜೀವನಾಡಿ. ಹತ್ತಿಕುಣಿ, ಯಡ್ಡಳ್ಳಿ, ಬಂದಳ್ಳಿ, ಹೊನಗೇರಾ, ಕಟಗಿಶಹಾಪೂರ, ದಸರಾಬಾದ್ ಗ್ರಾಮಗಳ ಒಟ್ಟು 5,300 ಎಕರೆ ಜಮೀನಿಗೆ ಈ ಅಣೆಕಟ್ಟು ನೀರುಣಿಸುತ್ತೆ. ಭತ್ತ, ಶೇಂಗಾ, ಹತ್ತಿ, ಜೋಳ, ಸಜ್ಜೆ, ಇನ್ನಿತರ ಬೆಳೆಗಳಿಗೆ ಇದುವೇ ಆಧಾರ.

ವಿಶಾಲವಾದ ಜಲಾಶಯದ ಮೇಲ್ಭಾಗ ಮೋಟ್ನಳ್ಳಿ, ಕೋಟಗೇರಾ ಕೆರೆಗಳು ಈಗಾಗಲೇ ತುಂಬಿವೆ. ಇದರಿಂದ ನೀರು ನಿರಂತರ ಜಲಾಶಯಕ್ಕೆ ಹರಿದು ಬರುತ್ತಿದೆ. 0.352 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗಾಗಲೇ 0.305 ಟಿಎಂಸಿ ನೀರು ಸಂಗ್ರಹವಿದೆ. ಇನ್ನೂ ಹೆಚ್ಚು ನೀರು ಹರಿದು ಬಂದರೆ ಜಲಾಶಯದ ಗೇಟ್‌ಗಳನ್ನು ತೆರೆಯಲು ನೀರಾವರಿ ಎಂಜಿನಿಯರ್ ಸಿದ್ಧಾರೂಡ ತಮ್ಮ ಸಿಬ್ಬಂದಿ ಜತೆ ಸ್ಥಳದಲ್ಲಿದ್ದಾರೆ.

ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಒಂದಾದ ಹತ್ತಿಕುಣಿ ಜಲಾಶಯಕ್ಕೆ ಸುತ್ತಮುತ್ತಲಿನ ಗ್ರಾಮಗಳ ಜನ ಆಗಮಿಸುತ್ತಿದ್ದಾರೆ. ಪ್ರವಾಸಿ ಮಂದಿರದ ಮುಂಭಾಗದಲ್ಲಿ ಗುರುಮಠಕಲ್ ಮತಕ್ಷೇತ್ರದ ನಾಗನಗೌಡ ಕಂದಕೂರು ಅವರು ಪ್ರವಾಸೋದ್ಯಮ ಇಲಾಖೆಯಿಂದ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಉದ್ಯಾನವನ, ಮಕ್ಕಳು ಆಟವಾಡಲು ಸೂಕ್ತ ವಾತಾವರಣ ನಿರ್ಮಾಣ ಮಾಡಲಾಗಿದೆ. ಜಲಾಶಯ ನೋಡಲು ಬಂದ ಜನ ತುಸು ಹೊತ್ತು ಈ ಉದ್ಯಾನದಲ್ಲಿಯೂ ಕಾಲಕಳೆಯುತ್ತಾರೆ.

ಡ್ಯಾಂ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಭರ್ತಿ ಆಗ್ತಿತ್ತು. ಆದರೆ, ಈ ಸಾರಿ ಅವಧಿಗೂ ಮೊದಲೇ ಜಲಾಶಯ ತುಂಬಿದ್ರಿಂದಾಗಿ ರೈತರ ಮುಂಗಾರು-ಹಿಂಗಾರು ಬೆಳೆಗೆ ಚಿಂತೆ ಇಲ್ಲ.

ABOUT THE AUTHOR

...view details