ಗಾಲ್ವನ್ ಅಮರ ಯೋಧರಿಗೆ ದೀಪ ಬೆಳಗಿ ಶ್ರದ್ದಾಂಜಲಿ ಸಲ್ಲಿಸಿದ ಜಯ ಕರ್ನಾಟಕ ಸಂಘಟನೆ - Yadagiri district news
ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಗಲ್ವಾನ್ ದಲ್ಲಿ ಅಮರರಾದ ಭಾರತೀಯ ವೀರ ಯೋಧರಿಗೆ ದೀಪ ಬೆಳಗಿಸಿ ಶ್ರದ್ದಾಂಜಲಿ ಸಲ್ಲಿಸಿದರು.
ಗುರುಮಠಕಲ್:ಗಾಲ್ವನ್ ಹುತಾತ್ಮ ಯೋಧರಿಗೆ ಜಯ ಕರ್ನಾಟಕ ಸಂಘಟನೆ ವತಿಯಿಂದ ದೀಪ ಬೆಳಗಿಸಿ ಮೌನಚಾರಣೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಪಟ್ಟಣದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಬಳಿ ಭಾರತದ ರಕ್ಷಣೆಗಾಗಿ ಹುತಾತ್ಮರಾದ 20 ಭಾರತೀಯ ವೀರ ಯೋಧರಿಗೆ ದೀಪ ಬೆಳಗಿಸಿ ಮೌನಚಾರಣೆ ಮಾಡುವ ಮೂಲಕ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ಚೀನಾದ ಹೀನಾಯ ಕೃತ್ಯವನ್ನು ಖಂಡಿಸಲಾಯಿತು.
ಜಯ ಕರ್ನಾಟಕ ಸಂಘಟನೆಯ ತಾಲೂಕ ಅಧ್ಯಕ್ಷರಾದ ನಾಗೇಶ ಗದ್ದಿಗಿ ಮಾತನಾಡಿ, ಇತ್ತೀಚೆಗೆ ಭಾರತ ದೇಶದ ಗಡಿಯಲ್ಲಿ ಕುತಂತ್ರಿ ಚೀನಾದ ಮೋಸದ ಆಟದಲ್ಲಿ ಪ್ರಾಣ ತೆತ್ತ ವೀರ ಯೋಧರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಮತ್ತು ಎಲ್ಲಾ ಚೀನಿಯರ ವಸ್ತುಗಳನ್ನು ಬಹೀಷ್ಕರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.